4
21 ವರ್ಷದ ಯುವಕನೊಬ್ಬ ದಾರಿಯುದ್ದಕ್ಕೂ ಸಿಕ್ಕಿಸಿಕ್ಕಿದವರಿಗೆ ಚಾಕುವಿನಿಂದ ಇರಿದಿದ್ದರಿಂದ 8 ಮಂದಿ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡ ಘಟನೆ ಚೀನಾದಲ್ಲಿ ನಡೆದಿದೆ.
ಶನಿವಾರ ಸಂಜೆ ವುಕ್ಸಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ವೃದ್ದನೊಬ್ಬ ಮನಬಂದಂತೆ ಕಾರು ಚಲಾಯಿಸಿದ್ದರಿಂದ 35 ಮಂದಿ ಮೃತಪಟ್ಟು, 45 ಮಂದಿ ಗಾಯಗೊಂಡ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆಘಾತ ಮೂಡಿಸಿದೆ.