Saturday, July 27, 2024
Google search engine
Homeಅಪರಾಧಪ್ರೇಮಿಸಿ 4 ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ದಂಪತಿ ಆತ್ಮಹತ್ಯೆ

ಪ್ರೇಮಿಸಿ 4 ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ದಂಪತಿ ಆತ್ಮಹತ್ಯೆ

ಪ್ರೇಮಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.

ಸಿದ್ದೇಶ್ವರ ಬಡಾವಣೆಯ ತಮ್ಮ ನಿವಾಸದಲ್ಲಿ ಮನೋಜ್ ಕುಮಾರ್ ಪೋಳ (30) ಮತ್ತು ಪತ್ನಿ ರಾಖಿ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೋಜ್ ಕುಮಾರ್ ತಾಯಿ ಭಾರತಿ ಮಗಳ ಮನೆಗೆ ಹೋದಾಗ ರಾತ್ರಿ ಊಟ ಮಾಡಿದ ನಂತರ ದಂಪತಿ ಫ್ಯಾನಿಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೋಜ್ ಕುಮಾರ್ ಮತ್ತು ರಾಖಿ ಪರಸ್ಪರ ಪ್ರೀತಿ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದರು. ಮನೋಜ್ ಕುಮಾರ್ ತಾಯಿ ಭಾರತಿ ಬೆಳಿಗ್ಗೆ ಮನೆಗೆ ವಾಪಸ್ಸಾದಾಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ನವದಂಪತಿ ಆತ್ಮಹತ್ಯೆ ಮಾಡಿಕೊಂಡ ಕಾರಣ ತಿಳಿದು ಬಂದಿಲ್ಲ. ಜಲನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments