Kannadavahini

ಬಾರಿಸು ಕನ್ನಡ ಡಿಂಡಿಮವ

ತಾಜಾ ಸುದ್ದಿ ದೇಶ

ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಶವ ಹೊತ್ತು ತಂದ ವಾಯುಪಡೆ ವಿಶೇಷ ವಿಮಾನ!

ಕುವೈತ್ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಶವವನ್ನು ವಾಯುಪಡೆಯ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ.

ಕೇರಳದ ಕೊಚ್ಚಿಗೆ ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ವಿಮಾನ ಆಗಮಿಸಲಿದೆ. ಮೃತಪಟ್ಟ ಭಾರತೀಯರಲ್ಲಿ ಬಹುತೇಕ ಮಂದಿ ಕೇರಳ ಮತ್ತು ತಮಿಳುನಾಡಿಗೆ ಸೇರಿದವರಾಗಿದ್ದಾರೆ.

ಗೊಂಡಾ ಸಂಸದ ಕೀರ್ತಿ ವರ್ಧನ್ ಸಿಂಗ್ ದುರಂತ ನಡೆದ ಬೆನ್ನಲ್ಲೇ ಕುವೈತಗೆ ಪ್ರಯಾಣಿಸಿ ಮೃತ ಭಾರತೀಯರ ಶವವನ್ನು ತವರಿಗೆ ತರಲು ಪ್ರಯತ್ನಿಸಿದ್ದಾರೆ.

ಎರಡು ದಿನಗಳ ಹಿಂದೆ ಮಂಗಾಫ್ ನಗರದಲ್ಲಿ 160ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದ ಬಿಲ್ಡಿಂಗ್ ಹೌಸಿಂಗ್ ವರ್ಕರ್ಸ್ ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. 6ನೇ ಮಹಡಿಯ ಕಿಚನ್ ನಲ್ಲಿ ಮೊದಲ ಬಾರಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡವನ್ನು ಆವರಿಸಿಕೊಂಡಿದ್ದರಿಂದ ಜನರು ಪಾರಾಗಲು ಸಾಧ್ಯವಾಗಿರಲಿಲ್ಲ.

LEAVE A RESPONSE

Your email address will not be published. Required fields are marked *