Kannadavahini

ಬಾರಿಸು ಕನ್ನಡ ಡಿಂಡಿಮವ

ಅಪರಾಧ ತಾಜಾ ಸುದ್ದಿ ದೇಶ

ನಡುರಸ್ತೆಯಲ್ಲಿ ಮಾಜಿ ಗೆಳತಿಗೆ ಸ್ಪಾನರ್ ನಿಂದ 15 ಬಾರಿ ಹೊಡೆದ ಕೊಂದ ಯುವಕ!

20 ವರ್ಷದ ಯುವಕನೊಬ್ಬ ನಡುರಸ್ತೆಯಲ್ಲಿ ಸ್ಪಾನರ್ ನಿಂದ 15 ಬಾರಿ ಹೊಡೆದು ಮಾಜಿ ಗೆಳತಿಯನ್ನು ಕೊಂದ ಆಘಾತಕಾರಿ ಘಟನೆ ಮುಂಬೈನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ರೋಹಿತ್ ಯಾದವ್ ಎಂಬಾತ ತನ್ನ ಮಾಜಿ ಗೆಳತಿ ಆರತಿ ಯಾದವ್ ಮತ್ತೊಬ್ಬನ ಸ್ನೇಹ ಮಾಡಿದ್ದಾಳೆ ಎಂಬ ಕಾರಣಕ್ಕೆ ನಡು ರಸ್ತೆಯಲ್ಲಿ ಬೆಂಬತ್ತಿ ಸ್ಪಾನರ್ ನಿಂದ ಹೊಡೆದಿದ್ದಾನೆ. ಜನರು ಭಾರೀ ಸಂಖ್ಯೆಯಲ್ಲಿ ಇದ್ದರೂ ಯಾರೂ ಆತನನ್ನು ತಡೆಯದೇ ನಿಂತು ನೋಡುತ್ತಿದ್ದರು.

ವಾಸಯಿ ನಗರದ ಚಿಂಚಪಡ ಎಂಬ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದಾರಿಯಲ್ಲಿ ನಡೆದು ಹೋಗುತ್ತಿದ್ದ ಆರತಿಗೆ ಹಿಂದಿನಿಂದ ಬಂದ ರೋಹಿತ್ ಯಾದವ್ ಬಲವಾಗಿ ತಲೆಯ ಮೇಲೆ ಬಾರಿಸಿದ್ದಾನೆ. ನೆಲಕ್ಕೆ ಕುಸಿದುಬಿದ್ದ ಆಕೆ ಮೇಲೇಳಲು ಪ್ರಯತ್ನಿಸುತ್ತಿದ್ದಾಗ ಆಕೆಯ ಮೇಲೆ 15 ಬಾರಿ ಸ್ಪಾನರ್ ನಿಂದ ಬಾರಿಸಿದ್ದಾನೆ. ಹೊಡೆಯುವಾಗ ನನಗೆ ಯಾಕೆ ಹೀಗೆ ಮಾಡಿದೆ ಎಂದು ಕಿರುಚಾಡಿದ್ದಾನೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ರೋಹಿತ್ ಹಲ್ಲೆ ನಡೆಸುವಾಗ ವ್ಯಕ್ತಿಯೊಬ್ಬ ತಡೆಯಲು ಬಂದಿದ್ದಾನೆ. ಆಗ ಸ್ಪಾನರ್ ನಿಂದ ಹೊಡೆಯುವುದಾಗಿ ಆತ ಬೆದರಿಸಿದಾಗ ಆತ ಹಿಂದೆ ಸರಿದಿದ್ದಾನೆ. ನಂತರ ಯಾರೂ ಆತನನ್ನು ತಡೆಯುವ ಪ್ರಯತ್ನವನ್ನೇ ಮಾಡದೇ ಘಟನೆಯನ್ನು ನೋಡುತ್ತಾ ನಿಂತಿದ್ದಾರೆ.

LEAVE A RESPONSE

Your email address will not be published. Required fields are marked *