Friday, September 20, 2024
Google search engine
Homeಕ್ರೀಡೆ5 ಆಟಗಾರರ ಅನುಪಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಕಾರಣ?

5 ಆಟಗಾರರ ಅನುಪಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಕಾರಣ?

ಪಂಜಾಬ್ ಕಿಂಗ್ಸ್ ವಿರುದ್ಧ ತವರಿನಲ್ಲಿ ಸೋಲುಂಡ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಐಪಿಎಲ್ ಪಂದ್ಯದಲ್ಲಿ 5 ಪ್ರಮುಖ ಆಟಗಾರರ ಕೊರತೆ ಎದುರಿಸಲಿದೆ.

ಬುಧವಾರ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಗಳ ಭಾರೀ ಅಂತರದಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲುಂಡಿತ್ತು. ಪಂಜಾಬ್ ವಿರುದ್ಧ ಚೆನ್ನೈಗೆ ಸತತ 5ನೇ ಸೋಲಾಗಿದೆ.

ಪಂದ್ಯದ ನಂತರ ಮಾತನಾಡಿದ ಕೋಚ್ ಸ್ಟಿಫನ್ ಫ್ಲೆಮಿಂಗ್, ಚೆನ್ನೈ ತಂಡ ಪ್ಲೇಆಫ್ ತಲುಪುವ ಅವಕಾಶ ಹೊಂದಿದೆ. ಈ ಹಂತದಲ್ಲಿ ಪ್ರಮುಖ 5 ಆಟಗಾರರ ಅನುಪಸ್ಥಿತಿ ತಂಡವನ್ನು ಕಾಡಲಿದೆ ಎಂದು ಹೇಳಿದ್ದಾರೆ.

ದೀಪಕ್ ಚಾಹರ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಮುಸ್ತುಫಿಜುರ್ ಬಾಂಗ್ಲಾದೇಶಕ್ಕೆ ಕ್ರಿಕೆಟ್ ಸರಣಿಗಾಗಿ ವಾಪಸ್ ತೆರಳಲಿದ್ದಾರೆ. ತುಷಾರ್ ದೇಶಪಾಂಡೆ ಜ್ವರದಿಂದ ಬಳಲುತ್ತಿದ್ದಾರೆ. ಶ್ರೀಲಂಕಾದ ಪತಿರಾಣ ಮತ್ತು ತೀಕ್ಷಣ ವೀಸಾ ಸಮಸ್ಯೆಯಿಂದ ಸ್ವದೇಶಕ್ಕೆ ಮರಳಿದ್ದು, ಶೀಘ್ರದಲ್ಲೇ ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments