Kannadavahini

ಬಾರಿಸು ಕನ್ನಡ ಡಿಂಡಿಮವ

ತಾಜಾ ಸುದ್ದಿ ವಿದೇಶ

ಬಿಸಿಗಾಳಿಗೆ ಮೃತಪಟ್ಟ 645 ಹಜ್ ಯಾತ್ರಿಗಳ ಪೈಕಿ 68 ಯಾತ್ರಿಗಳು ಭಾರತೀಯರು!

ಬಿಸಿಗಾಳಿಯಿಂದ ಮೆಕ್ಕಾದಲ್ಲಿ ಮೃತಪಟ್ಟ 645 ಹಜ್ ಯಾತ್ರಿಗಳ ಪೈಕಿ 68 ಮಂದಿ ಭಾರತೀಯರು ಎಂದು ಸೌದಿ ಅರೆಬಿಯಾ ರಾಯಭಾರ ಕಚೇರಿ ಹೇಳಿದೆ.

ಮೆಕ್ಕಾಗೆ ಭೇಟಿ ನೀಡಿದ 68 ಭಾರತೀಯರು ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ವಯೋವೃದ್ಧರಾಗಿದ್ದು ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರೆ, ಇನ್ನು ಕೆಲವರು ಬಿಸಿಗಾಳಿಯಿಂದ ಅಸುನೀಗಿದ್ದಾರೆ ಎಂದು ಸೌದಿ ಅರೆಬಿಯಾ ತಿಳಿಸಿದೆ.

ಮುಸ್ಲಿಮರ ಪವಿತ್ರ ಯಾತ್ರೆಯಾದ ಹಜ್ ಗೆ ಪ್ರತಿಯೊಬ್ಬ ಮುಸ್ಲಿಮರು ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ ಭೇಟಿ ನೀಡಬೇಕು ಎಂಬ ಪ್ರತೀತಿ ಇದೆ. ಸೌದಿ ಅರೆಬಿಯಾ 550 ಮಂದಿ ಮೃತಪಟ್ಟಿದ್ದನ್ನು ಘೋಷಿಸಿತ್ತು. ಆದರೆ ಒಂದು ದಿನದ ಅಂತರದಲ್ಲಿ ಸಾವಿನ ಸಂಖ್ಯೆ 650ಕ್ಕೆ ಏರಿಕೆಯಾಗಿದ್ದು, ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

LEAVE A RESPONSE

Your email address will not be published. Required fields are marked *