Sunday, May 5, 2024
Google search engine
Homeತಾಜಾ ಸುದ್ದಿಸಲ್ಮಾನ್ ಖಾನ್ ಮನೆ ಮುಂದೆ ಹಾರಿಸಿದ ಗನ್, ಬುಲೆಟ್ ಗುಜರಾತ್ ನದಿಯಲ್ಲಿ ಪತ್ತೆ!

ಸಲ್ಮಾನ್ ಖಾನ್ ಮನೆ ಮುಂದೆ ಹಾರಿಸಿದ ಗನ್, ಬುಲೆಟ್ ಗುಜರಾತ್ ನದಿಯಲ್ಲಿ ಪತ್ತೆ!

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಮುಂದೆ ದುಷ್ಕರ್ಮಿಗಳು ಹಾರಿಸಿದ ಗನ್ ಮತ್ತು ಬುಲೆಟ್ ಗುಜರಾತ್ ನದಿಯಲ್ಲಿ ಪತ್ತೆಯಾಗಿದೆ.

ಏಪ್ರಿಲ್ 14ರಂದು ಸಲ್ಮಾನ್ ಖಾನ್ ಅವರ ಬಾಂದ್ರಾ ಅಪಾರ್ಟ್ ಮೆಂಟ್ ಬಳಿ ಗುಂಡು ಹಾರಿಸಿ ಪರಾರಿಯಾಗಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮುಂಬೈ ಪೊಲೀಸರು ಮಂಗಳವಾರ ಗುಜರಾತ್ ನ ತಾಪಿ ನದಿಯಲ್ಲಿ ಸುಲ್ಮಾನ್ ಖಾನ್ ಮನೆ ಮುಂದೆ ಗುಂಡು ಹಾರಿಸಲು ಬಳಸಿದ 2 ಗನ್ ಮತ್ತು 13 ಬುಲೆಟ್ ಗಳ ಮ್ಯಾಗಜೈನ್ ಅನ್ನು ಪತ್ತೆ ಹಚ್ಚಿದ್ದಾರೆ.

ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ನೇತೃತ್ವದ 12 ಅಧಿಕಾರಿಗಳ ಪೊಲೀಸ್ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ನದಿಯ ಆಳದಲ್ಲಿದ್ದ ಗನ್ ಹಾಗೂ ಗುಂಡುಗಳನ್ನು ಸ್ಕೂಬಾ ಡ್ರೈವರ್ ಗಳ ಸಹಾಯದಿಂದ ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments