Saturday, May 18, 2024
Google search engine
Homeಅಪರಾಧಎಚ್.ಡಿ. ರೇವಣ್ಣ ಆಪ್ತ ಸಹಾಯಕ ಸತೀಶ್ ಬಾಬು ಎಸ್ ಐಟಿ ವಶಕ್ಕೆ

ಎಚ್.ಡಿ. ರೇವಣ್ಣ ಆಪ್ತ ಸಹಾಯಕ ಸತೀಶ್ ಬಾಬು ಎಸ್ ಐಟಿ ವಶಕ್ಕೆ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪುತ್ರ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಬಂಧನ ಬೆನ್ನಲ್ಲೇ ಅವರ ಆಪ್ತ ಸಹಾಯಕನನ್ನು ಎಸ್ ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಪ್ರಕರಣದಲ್ಲಿ ಮನೆಕೆಲಸದಾಕೆ ಅಪಹರಣ ಮಾಡಿದ್ದಕ್ಕಾಗಿ ಎಚ್.ಡಿ. ರೇವಣ್ಣ ಅವರನ್ನು ಬೆಂಗಳೂರಿನಲ್ಲಿ ಎಸ್ ಐಟಿ ಪೊಲೀಸರು ಬಂಧಿಸಿದ್ದರು/

ಎಚ್.ಡಿ. ರೇವಣ್ಣ ಬಂಧನದ ಬೆನ್ನಲ್ಲೇ ಅವರ ಆಪ್ತ ಸಹಾಯಕ ಸತೀಶ್ ಬಾಬು ಅವರನ್ನು ಮೈಸೂರಿನ ಹುಣಸೂರು ಬಳಿ ವಶಕ್ಕೆ ಪಡೆಯಲಾಗಿದೆ.

ಎಚ್.ಡಿ.ರೇವಣ್ಣ ಅವರ ಮನೆಕೆಲಸದಾಕೆಯನ್ನು ಕಿಡ್ನಾಪ್ ಮಾಡಿ ಹುಣಸೂರು ತಾಲೂಕಿನ ಕಾಳೇನಗಹಳ್ಳಿ ತೋಟದಲ್ಲಿ ಬಚ್ಚಿಡಲಾಗಿತ್ತು. ಪೊಲೀಸರು ಕಿಡ್ನಾಪ್ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಸತೀಶ್ ಬಾಬು ನನ್ನು ವಶಕ್ಕೆ ಪಡೆಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments