Home ತಾಜಾ ಸುದ್ದಿ ಬಿಎಸ್ ವೈ ಪುತ್ರ ರಾಘವೇಂದ್ರ ವಿರುದ್ಧ ಶಿವಮೊಗ್ಗದಿಂದ ಸ್ಪರ್ಧೆ: ಕೆಎಸ್ ಈಶ್ವರಪ್ಪ ಘೋಷಣೆ

ಬಿಎಸ್ ವೈ ಪುತ್ರ ರಾಘವೇಂದ್ರ ವಿರುದ್ಧ ಶಿವಮೊಗ್ಗದಿಂದ ಸ್ಪರ್ಧೆ: ಕೆಎಸ್ ಈಶ್ವರಪ್ಪ ಘೋಷಣೆ

by Editor
0 comments

ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗದಲ್ಲಿ ಶುಕ್ರವಾರ ಬೆಂಬಲಿಗರ ಸಭೆ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಕಣಕ್ಕಿಳಿಯುತ್ತಿದ್ದೇನೆ. ಗೆದ್ದ ಮೇಲೆ ಮತ್ತೆ ಬಿಜೆಪಿಗೆ ಸೇರ್ಪಡೆ ಆಗುತ್ತೇನೆ ಎಂದರು.

ಯಡಿಯೂರಪ್ಪನವರು ತಮಗೆ ಬೇಕಾದವರಿಗೆ ಟಿಕೆಟ್‌ ನೀಡಿದ್ದಾರೆ. ಅವರಿಗೆ ಬೇಕಾದವರು ಸೋತರೆ ಅದಕ್ಕೆ ಅವರೇ ಹೊಣೆ. ಹೈಕಮಾಂಡ್ ನೀಡಿದ ಅಧಿಕಾರವನ್ನು ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಟಿ.ರವಿ ಎಲ್ಲಾ ಕಡೆ ಓಡಾಡಿದ್ದಾರೆ. ಪಕ್ಷ ಸಂಘಟನೆ ಮಾಡಿದ್ದಾರೆ. ನಾನು ಸಿ.ಟಿ.ರವಿ ಜೊತೆ ನಿನಗೆ ಸ್ಪರ್ಧೆ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದ್ದೆ. ಶೋಭ ಕರಂದ್ಲಾಜೆ ನಿಲ್ಲದಿದ್ದರೆ ನಿಲ್ಲುತ್ತೇನೆ ಎಂದಿದ್ದರು. ಶೋಭ ಅವರಿಗೆ ಸಿಗಲಿಲ್ಲ ಆದರೆ ಬೇರೆಯವರಿಗೆ ‌ಕೊಟ್ಟರು ಎಂದು ಅವರು ವಿವರಿಸಿದರು.

banner

ಹಿಂದುತ್ವದ ಪರ ಮಾತನಾಡುವ ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನಂದಗೌಡ ಅವರಿಗೆ ಟಿಕೆಟ್ ತಪ್ಪಿಸಿದರು. ಹಠ ಹಿಡಿದು ತನಗೆ ಏನು‌ಬೇಕೋ ಅದೇ ಮಾಡುವಾಗ ಹಿರಿಯರು ಒಪ್ಪಿಗೆ ಕೊಟ್ಟರು. ಯಡಿಯೂರಪ್ಪ ಹಿರಿಯ ನಾಯಕ ಎಂದು ಕೇಂದ್ರದ ನಾಯಕರು ಅವರ ಮಾತು‌ ಕೇಳಿದರು ಎಂದು ಸಿಟ್ಟು ಹೊರ ಹಾಕಿದರು.

ಬೊಮ್ಮಾಯಿ‌ ಅವರು ನನಗೆ ಆರೋಗ್ಯ ಸರಿ ಇಲ್ಲ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಕೆಲವರು ಬೊಮ್ಮಾಯಿ ಅವರನ್ನು ನಂಬಬೇಡಿ ಎಂದು ಹೇಳಿದರು. ಕೇಂದ್ರ ಸಮಿತಿಗೆ ಬೊಮ್ಮಾಯಿ, ಕಾಂತೇಶ್, ಶೆಟ್ಟರ್ ಹೆಸರು ಹೋಯ್ತು. ಬೊಮ್ಮಾಯಿ ಅವರೇ ಬೇಡ ಅಂದ ಮೇಲೆ ಅವರ ಹೆಸರು ಹೇಗೆ ಹೋಯ್ತು ಎಂದು ಪ್ರಶ್ನಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಷೇರು ಮಾರುಕಟ್ಟೆ: 4 ದಿನದಲ್ಲಿ ಹೂಡಿಕೆದಾರರಿಗೆ 24.69 ಲಕ್ಷ ಕೋಟಿ ರೂ. ನಷ್ಟ! 4 ಮಕ್ಕಳನ್ನು ಹೆತ್ತರೆ 1 ಲಕ್ಷ ರೂ. ಬಹುಮಾನ: ಬ್ರಾಹ್ಮಣ ಮಂಡಳಿ ಘೋಷಣೆ ರಾಜ್ಯ ಸರ್ಕಾರದ ಹೆಚ್ಚುವರಿ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ! ಗೋವುಗಳ ಕೆಚ್ಚಲು ಕೊಯ್ದು ವಿಕೃತಿ: ಪರಿಸರವಾದಿಗಳಿಂದ ಮೇಣಬತ್ತಿ ಹಚ್ಚಿ ಪ್ರತಿಭಟನೆ Austrelian Open: 19 ವರ್ಷದ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ ಜಪಾನ್ ನಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ 3 ಐಎನ್ ಎಸ್ ಯುದ್ಧ ನೌಕೆಗಳನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ! ಖಾತಾ ಇಲ್ಲದ ಆಸ್ತಿಗಳಿಗಾಗಿ ಬಿಬಿಎಂಪಿಯಿಂದ ವೆಬ್ ಸೈಟ್ ಬಿಡುಗಡೆ: ಖಾತಾ ಪಡೆಯುವ ವಿಧಾನ ಇಲ್ಲಿದೆ! ನೇಮಕಾತಿಯ ಮೆಸೇಜ್ ಸುಳ್ಳು, ನಂಬಬೇಡಿ: ಸಣ್ಣ ನೀರಾವರಿ ಇಲಾಖೆ ಸ್ಪಷ್ಟನೆ 2024ರಲ್ಲಿ ಹತ್ಯೆಯಾದ ಉಗ್ರರಲ್ಲಿ ಶೇ.60ರಷ್ಟು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಉಪೇಂದ್ರ!