7
ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿನ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಈ ಮೂಲಕ ದೇಶಾದ್ಯಂತ ನಡೆಯುತ್ತಿರುವ ನವರಾತ್ರಿ ಉತ್ಸವದಂದು ರೈತರಿಗೆ ಸಿಹಿಸುದ್ದಿ ದೊರೆತಿದೆ.
ರೈತರಿಗೆ ವರ್ಷದಲ್ಲಿ 8 ಸಾವಿರ ರೂ.ನಂತೆ ಮೂರು ತಿಂಗಳಿಗೆ ಒಮ್ಮೆ ತಲಾ 2000 ರೂ.ವನ್ನು ನೆರವು ನೀಡಲಾಗುತ್ತಿದೆ. ಶನಿವಾರ 9.4 ಕೋಟಿ ರೈತರ ಖಾತೆಗಳಿಗೆ ಹಣ ಪಾವತಿ ಮಾಡಲಾಗಿದೆ.
9.4 ಕೋಟಿ ರೈತರ ಖಾತೆಗಳಿಗೆ ಒಟ್ಟಾರೆ 20 ಸಾವಿರ ಕೋಟಿ ರೂ. ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.