ಕಾಮಿಡಿ ಕಲಾವಿದ ಕಪಿಲ್ ಶರ್ಮ ಒಡೆತನದ ಕೆನಡಾದಲ್ಲಿನ ಕಪಿಲ್ಸ್ ಕೆಫೆ ಮೇಲೆ ದುಷ್ಕರ್ಮಿಗಳು 25 ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನಡೆದ ಎರಡನೇ ದಾಳಿ ಇದಾಗಿದೆ.
ಕೆನಡಾದ ಸರ್ರೆಯಲ್ಲಿರುವ ಕಪಿಲ್ ಶರ್ಮ ಕೆಫೆ ಮೇಲೆ ಗುರುವಾರ ನಡೆದ ದಾಳಿಯ ಹೊಣೆಯಲ್ಲಿ ಎರಡು ಗ್ಯಾಂಗ್ ಗಳು ಹೊತ್ತುಕೊಂಡಿವೆ. ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ದಿಲ್ಹೋನ್ ಮತ್ತು ಲಾರೆನ್ಸ್ ಬಿಶ್ನೋಯಿ ಸಾಮಾಜಿಕ ಜಾಲತಾಣದಲ್ಲಿ ಈ ದಾಳಿಯ ಹೊಣೆ ಹೊತ್ತುಕೊಂಡಿವೆ.
ಕಪಿಲ್ ಶರ್ಮ ಕೆಫೆ ಮೇಲೆ 25 ಬಾರಿ ಗುಂಡಿನ ದಾಳಿ ನಡೆಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾವು ಮೊದಲ ಬಾರಿ ಗಂಟೆ ಬಾರಿಸಿದೆವು. ಆದರೆ ಅದರ ಶಬ್ಧ ಆತನಿಗೆ ಕೇಳಿಸಲಿಲ್ಲ. ಹಾಗಾಗಿ ಈ ಬಾರಿ ದೊಡ್ಡದಾಗಿ ಶಬ್ಧ ಮಾಡಿದ್ದೇವೆ ಎಂದು ವೀಡಿಯೋ ಮೇಲೆ ದುಷ್ಕರ್ಮಿಗಳು ಶಿರ್ಷಿಕೆ ಹಾಕಿಕೊಂಡಿದ್ದಾರೆ.
ಖಾಲಿಸ್ತಾನಿ ಉಗ್ರರು ಮೊದಲ ಬಾರಿ ದಾಳಿ ನಡೆಸಿದ್ದರು ಎಂದು ಹೇಳಲಾಗಿದ್ದು, ಕಪಿಲ್ ಶರ್ಮ ಹಾಗೂ ಪತ್ನಿ ಒಡೆತನ ಹೊಂದಿದ್ದು, ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.



