Kannadavahini

ಬಾರಿಸು ಕನ್ನಡ ಡಿಂಡಿಮವ

ತಾಜಾ ಸುದ್ದಿ ದೇಶ ರಾಜಕೀಯ

ವಯನಾಡಿಂದ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಪ್ರಿಯಾಂಕ ಮೊದಲ ಪ್ರತಿಕ್ರಿಯೆ!

ನಾನು ಯಾವುದೇ ಒತ್ತಡದಲ್ಲಿ ಇಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪಕ್ಷದಿಂದ ಅಧಿಕೃತ ಘೋಷಣೆ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯನಾಡು ಕ್ಷೇತ್ರದ ಜನರನ್ನು ಪ್ರತಿನಿಧಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ರಾಹುಲ್ ಗಾಂಧಿ ಅನುಪಸ್ಥಿತಿ ವಯನಾಡು ಕ್ಷೇತ್ರದ ಜನರನ್ನು ಕಾಡದಂತೆ ನೋಡಿಕೊಳ್ಳುವೆ ಎಂದರು.

ರಾಹುಲ್ ಗಾಂಧಿ ಆಗಾಗ ವಯನಾಡಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ನಾನು ಕ್ಷೇತ್ರದ ಜನರ ಪರವಾಗಿ ಉತ್ತಮ ಕೆಲಸ ಮಾಡುತ್ತೇನೆ. ಯಾರಿಗೂ ನಿರಾಸೆ ಮಾಡುವುದಿಲ್ಲ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಬಿಟ್ಟುಕೊಟ್ಟ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಅಧಿಕೃತ ಘೋಷಣೆ ಮಾಡಿದರು. ಈ ಮೂಲಕ ಪ್ರಿಯಾಂಕ ಅಧಿಕೃತವಾಗಿ ಸಕ್ರಿಯ ರಾಜಕಾರಣಕ್ಕೆ ಕೊನೆಗೂ ಪ್ರವೇಶಿಸಿದ್ದಾರೆ.

LEAVE A RESPONSE

Your email address will not be published. Required fields are marked *