Home ತಾಜಾ ಸುದ್ದಿ ಅಗ್ನಿ-5 ಯಶಸ್ಸಿನ ಹಿಂದಿನ ಮಹಿಳಾ ವಿಜ್ಞಾನಿ ಶೀನಾ ರಾಣಿಯ ಶಕ್ತಿ!

ಅಗ್ನಿ-5 ಯಶಸ್ಸಿನ ಹಿಂದಿನ ಮಹಿಳಾ ವಿಜ್ಞಾನಿ ಶೀನಾ ರಾಣಿಯ ಶಕ್ತಿ!

by Editor
0 comments

ಬಹು ಸಿಡಿತಲೆಯ ಅಗ್ನಿ-5 ಕ್ಷಿಪಣಿ ಪರೀಕ್ಷೆ `ಮಿಷನ್ ದಿವ್ಯಾಸ್ತ್ರ’ ಯಶಸ್ಸಿನ ಹಿಂದೆ ಮಹಿಳಾ ವಿಜ್ಞಾನಿ ಶೀನಾ ರಾಣಿ ಮಹತ್ವದ ಪಾತ್ರ ವಹಿಸಿ ಸ್ಫೂರ್ತಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಿಷನ್ ದಿವ್ಯಾಸ್ತ್ರ ಎಂದು ಕರೆದ ಅಗ್ನಿ-5 ಕ್ಷಿಪಣಿಯನ್ನು ವಾಯು ಮೂಲಕ ಚಿಮ್ಮಿಸಿ ಗುರಿ ತಲುಪಿಸುವ ಮಹತ್ವದ ಪರೀಕ್ಷೆ ಯಶಸ್ವಿಯಾಗಿತ್ತು. ಅಗ್ನಿ 5 5200ರಿಂದ 5500 ಕಿ.ಮೀ. ದೂರ ನಿಖರ ಗುರಿ ತಲುಪಿತ್ತು.

ಅಗ್ನಿ-5 ಕ್ಷಿಪಣಿ ಯೋಜನೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಮುಖಸ್ಥೆ ಶೀನಾ ರಾಣಿ ಮುನ್ನಡೆಸಿದ್ದಾರೆ. 1999ರಿಂದ ಅಗ್ನಿ-5 ಕ್ಷಿಪಣಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಶೀನಾ ರಾಣಿ ಈ ಬಾರಿ ತಾವೇ ನೇತೃತ್ವ ವಹಿಸಿದ್ದರು.

ಅಗ್ನಿ-5 ಕ್ಷಿಪಣಿ ಹಲವು ಸಿಡಿತಲೆಗಳನ್ನು ಹೊಂದಿದ್ದು, ಸ್ವಯಂ ಆಗಿ ಶಸ್ತ್ರಾಸ್ತ್ರ ಲೋಡ್ ಮಾಡಿಕೊಳ್ಳುತ್ತದೆ. ಅಲ್ಲದೇ ಅಣು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಏಕಕಾಲದಲ್ಲಿ ಹಲವು ಗುರಿಗಳನ್ನು ಏಕಕಾಲದಲ್ಲಿ ತಲುಪುತ್ತದೆ.

banner

ಅಗ್ನಿ ಸರಣಿ ಕ್ಷಿಪಣಿ ತಯಾರಿಕೆ ಹಾಗೂ ಅಭಿವೃದ್ಧಿಯಲ್ಲಿ 25 ವರ್ಷಗಳ ಅನುಭವ ಹೊಂದಿರುವ 57 ವರ್ಷದ ಶೀನಾ ರಾಣಿ, ಡಿಆರ್ ಡಿಒ ವಿಭಾಗದ ಅಡ್ವಾನ್ಸ್ ಸಿಸ್ಟಮ್ ಲ್ಯಾಬೊರೆಟರಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಪದವಿ ಪಡೆದಿದ್ದು ಶೀನಾ ರಾಣಿ, ಭಾರತದ ನಾಗರಿಕ ರಾಕೆಟ್ ಲ್ಯಾಬ್ ನಲ್ಲಿ ವಿಕ್ರಂ ಸರಾಭಾಯಿ  ಸ್ಪೇಸ್ ಸೆಂಟರ್ ಉಸ್ತುವಾರಿಯನ್ನು ಹೊತ್ತಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಶಾಲೆಯ ಮುಖ್ಯೋಪಾಧ್ಯಯರಿಗೆ ಗುಂಡಿಕ್ಕಿ ಕೊಂದ 12ನೇ ತರಗತಿ ವಿದ್ಯಾರ್ಥಿ! ದೇವಸ್ಥಾನಕ್ಕೆ 23 ಕೋಟಿ ಕ್ಯಾಷ್, 1 ಕೆಜಿ ಚಿನ್ನದ ಬಿಸ್ಕತ್ತು, ಬೆಳ್ಳಿ ಪಿಸ್ತೂಲು ದಾನ! ವಿಜಯಪುರ: ಕಾರಿಗೆ ಕಬ್ಬು ಕಟಾವು ಮೆಷಿನ್ ಡಿಕ್ಕಿಯಾಗಿ 5 ಮಂದಿ ದುರ್ಮರಣ ಎಲ್ಲಾ ಕೃಷಿ ಉತ್ಪನ್ನ ಕನಿಷ್ಠ ಬೆಂಬಲ ಬೆಲೆಗೆ ಖರೀದಿ: ಕೇಂದ್ರ ಮಹತ್ವದ ಘೋಷಣೆ ಅಂಡರ್ 19 ಏಷ್ಯಾಕಪ್: ಲಂಕೆ ಮಣಿಸಿ ಫೈನಲ್ ಗೆ ಭಾರತ ಲಗ್ಗೆ ಸ್ಟಾರ್ಕ್ 6 ವಿಕೆಟ್‌: ಭಾರತದ ಮೊದಲ ದಿನವೇ 180 ರನ್ ಗೆ ಆಲೌಟ್! ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ಓಪನಿಂಗ್: ಎಲ್ಲಾ ದಾಖಲೆ ಮುರಿದ ಪುಷ್ಪ-2 ಹ್ಯಾಟ್ರಿಕ್ ಸೋಲಿನ ಸರದಾರ ನಿಖಿಲ್ ಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಸಾರಥ್ಯ: ಬಿಜೆಪಿ ಜೊತೆ ಚರ್ಚೆ ಆರಂಭ! ಕಾಂಗ್ರೆಸ್ ಸಂಸದರ ಆಸನದಲ್ಲಿ ನೋಟಿನ ಕಂತೆ ಪತ್ತೆ: ರಾಜ್ಯಸಭೆಯಲ್ಲಿ ಕೋಲಾಹಲ 2025ರ ಶೈಕ್ಷಣಿಕ ಪ್ರವೇಶಾತಿಗೆ ವರ್ಲ್ಡ್ ಯುನಿವರ್ಸಿಟಿ ಆಫ್ ಡಿಸೈನ್ ಸಂಸ್ಥೆಯಿಂದ ಅರ್ಜಿ ಆಹ್ವಾನ