Wednesday, November 6, 2024
Google search engine
Homeಜ್ಯೋತಿಷ್ಯ2025ರಲ್ಲಿ ದುರಂತ: ಬಾಬಾ ವೆಂಗಾ, ನಾಸ್ಟ್ರಾಡ್ಯಾಮಸ್ ಒಂದೇ ರೀತಿಯ ಭವಿಷ್ಯ!

2025ರಲ್ಲಿ ದುರಂತ: ಬಾಬಾ ವೆಂಗಾ, ನಾಸ್ಟ್ರಾಡ್ಯಾಮಸ್ ಒಂದೇ ರೀತಿಯ ಭವಿಷ್ಯ!

ಜಗತ್ತಿನಲ್ಲಿ ಅತ್ಯಂತ ನಿಖರ ಭವಿಷ್ಯಕ್ಕೆ ಹೆಸರಾದ ದಂತಕತೆಗಳಾದ ಬಲ್ಗೇರಿಯಾದ ಅಂಧ ಬಾಬಾ ವೆಂಗಾ ಮತ್ತು ನಾಸ್ಟ್ರಾಡ್ಯಾಮಸ್ 2025ನೇ ಸಾಲಿನ ಭವಿಷ್ಯವಾಣಿ ಇದೀಗ ವೈರಲ್ ಆಗಿದೆ.

ಜಗತ್ತಿನಲ್ಲಿ ಪ್ರಸ್ತುತ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಸ್ತರಣೆ ಆಗುತ್ತಲೇ ಇದೆ. ಅಲ್ಲದೇ ದಾಳಿಯ ಪ್ರಮಾಣ ಕೂಡ ಹೆಚ್ಚಾಗುತ್ತಲೇ ಇದ್ದು ಉದ್ವಿಗ್ನ ವಾತಾರಣ ನಿರ್ಮಾಣವಾಗಿದೆ.

16ನೇ ಶತಮಾನದಲ್ಲಿ ಬದುಕಿದ್ದ ನಾಸ್ಟ್ರಾಡ್ಯಾಮಸ್ ಮತ್ತು ಬಾಬಾ ವೆಂಗಾ 2025ನೇ ವರ್ಷದ ಭವಿಷ್ಯ ಒಂದೇ ರೀತಿ ನೀಡಿದ್ದು ಅಚ್ಚರಿ ಮೂಡಿಸಿದೆ. ಅಲ್ಲದೇ ಇವರಿಬ್ಬರ ಭವಿಷ್ಯ ಬಹುತೇಕ ನಿಜವಾಗಿರುವುದರಿಂದ ಆತಂಕ ಹೆಚ್ಚಾಗಿದೆ.

ನಾಸ್ಟ್ರಾಡಾಮಸ್ ನುಡಿದಿದ್ದ ಬಹುತೇಕ ಭವಿಷ್ಯಗಳು ನಿಜವಾಗಿವೆ. 16ನೇ ಶತಮಾನದಲ್ಲಿ ಬದುಕಿದ್ದ ನಾಸ್ಟ್ರಾಡ್ಯಾಮಸ್ ತಮ್ಮ ಜೀವಿತಾವಧಿಯಲ್ಲಿ ಮುಂದಿನ ಸಾವಿರಾರು ವರ್ಷಗಳ ಕಾಲ ಭೂಮಿ ಮೇಲೆ ಜರುಗಬಹುದಾದ ಘಟನೆಗಳನ್ನು ಮೊದಲೇ ಭವಿಷ್ಯ ನುಡಿದಿದ್ದಾರೆ. ಮತ್ತು ಬಹುತೇಕ ಭವಿಷ್ಯ ವಾಣಿ ನಿಜವಾಗಿದೆ.

ಬಾಬಾ ವಂಗಾರನ್ನು ನಾಸ್ಟ್ರಾಡಾಮಸ್‌ಗೆ ಹೋಲಿಸಲಾಗುತ್ತದೆ. ಆಕೆ ನುಡಿದ ಭವಿಷ್ಯಗಳು ಕೂಡ ನಿಜವಾಗುತ್ತಿವೆ. ಬಾಲ್ಯದಲ್ಲೇ ಕಣ್ಣು ಕಳೆದುಕೊಂಡರೂ ಅತೀಂದ್ರಿಯ ಶಕ್ತಿ ಮೂಲಕ ಭವಿಷ್ಯ ನುಡಿದಿದ್ದಾರೆ.

ನಾಸ್ಟ್ರಾಡಾಮಸ್ ಹಾಗೂ ಬಾಬಾ ವಂಗಾ ಇಬ್ಬರೂ ಒಂದೇ ರೀತಿಯ ಭವಿಷ್ಯ ನುಡಿದಿದ್ದಾರೆ. ಹೌದು, 2025 ವರ್ಷದಲ್ಲಿ ನಡೆಯುವ ಪ್ರಮುಖ ಘಟನೆ ಅದರಲ್ಲೂ ವಿಲಕ್ಷಣ ಹಾಗೂ ದುರಂತ ಘಟನೆಗಳು ಕುರಿತು ಇಬ್ಬರೂ ಕೂಡ ಒಂದೇ ರೀತಿಯ ಭವಿಷ್ಯ ನುಡಿದಿದ್ದಾರೆ.

1996ರಲ್ಲಿ ನಿಧನರಾದ ಬಾಬಾ ವಂಗಾ ಕೂಡ 2025ರಲ್ಲಿ ಯುರೋಪ್‌ನಲ್ಲಿ ಹಲವು ರೀತಿಯ ದುರಂತಗಳು ಸಂಭವಿಸಿಲಿದೆ ಎಂದು ಹೇಳಿದ್ದಾರೆ. ಮುಖ್ಯವಾಗಿ ಉಕ್ರೇನ್-ರಷ್ಯಾ ನಡುವಿನ ಯುದ್ಧದಲ್ಲಿ ಎರಡು ಹೊಸ ರಾಷ್ಟ್ರಗಳು ಸೇರ್ಪಡೆಯಾಗಲಿವೆ ಎಂದು ಹೇಳಿದ್ದಾರೆ. ಅನ್ಯಗ್ರಹ ಜೀವಿಗಳ ಕುರಿತ ಬಹುದೊಡ್ಡ ಪ್ರಗತಿ ಕಾಣಲಿದ್ದೇವೆ ಎಂದಿದ್ದಾರೆ.

ನಾಸ್ಟ್ರಾಡ್ಯಾಮಸ್ ಕೂಡ 2025ರಲ್ಲಿ ಯುರೋಪ್ ರಾಷ್ಟ್ರಗಳು ಯುದ್ಧವನ್ನು ಎದುರಿಸಲಿದ್ದು, ದುರಂತಗಳು ಸಂಭವಿಸಲಿವೆ ಎಂದು ಹೇಳಿದ್ದಾರೆ.

ಈ ಭವಿಷ್ಯ ವಾಣಿಗಳು ಆತಂಕ ಮೂಡಿಸಿದ್ದು, ಜಗತ್ತಿನ ಜನರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಉಕ್ರೇನ್-ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದರೆ, ಇರಾನ್, ಇಸ್ರೇಲ್, ಗಾಜಾ, ಲೆಬೆನಾನ್ ನಡುವೆ ಯುದ್ಧ ನಡೆಯುತ್ತಿದ್ದು, ಅಮರಿಕ ಕೂಡ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments