ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ ಬಿಐ) ವರ್ಜಿಯಾನಿಯಾದ ತೋಟದಲ್ಲಿ ಅಡಗಿಸಲಾಗಿದ್ದ 150 ಕಚ್ಛಾ ಪೈಪ್ ಬಾಂಬ್ ಗಳನ್ನು ಪತ್ತೆ ಹಚ್ಚಿದೆ.
ಅಮೆರಿಕ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಕಚ್ಛಾ ಬಾಂಬ್ ಪತ್ತೆ ಪ್ರಕರಣ ಇದಾಗಿದ್ದು, ಸುಮಾರು ೨೦ ಎಕರೆ ತೋಟದಲ್ಲಿ ಬಾಂಬ್ ಹಾಗೂ ಸ್ಫೋಟಕಕ್ಕೆ ಬಳಸುವ ಸಾಮಾಗ್ರಿಗಳನ್ನು ಅಡಗಿಸಿಡಲಾಗಿತ್ತು.
ಡಿಸೆಂಬರ್ 17ರಂದು ನಡೆದ ದಾಳಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದ 36 ವರ್ಷದ ಬ್ರಾಡ್ ಸ್ಪಾಫೋರ್ಡ್ ಎಂಬಾತನ ತೋಟದಲ್ಲಿ ಅಪಾರ ಪ್ರಮಾಣದ ಕಚ್ಛಾ ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೋರ್ಟ್ ಗೆ ಹಾಜರುಪಡಿಸುವಾಗ ವಿವರಗಳನ್ನು ನೀಡಲಾಗಿದೆ.
2021ರಿಂದ ಬ್ರಾಡ್ ಕಚ್ಛಾ ಬಾಂಬ್ ತಯಾರಿಕೆ ಆರಂಭಿಸಿದ್ದು, ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಅವರ ಫೋಟೊಗಳನ್ನು ಹೊಂದಿದ್ದ. ಅಲ್ಲದೇ ತನ್ನ ತೋಟದಲ್ಲಿ ಅಕ್ರಮವಾಗಿ ಗನ್ ಶೂಟಿಂಗ್ ಅಭ್ಯಾಸಕ್ಕೆ ಅವಕಾಶ ಕೊಟ್ಟಿದ್ದ ಎಂದು ನೆರೆಹೊರೆಯವರು ನೀಡಿದ ದೂರಿನ ಮೇಲೆ ಎಫ್ ಬಿಐ ದಾಳಿ ಮಾಡಿದೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರನ್ನು ಶೂಟರ್ ಶೂಟ್ ಮಾಡಲು ವಿಫಲವಾದ ಬಗ್ಗೆ ಪ್ರಸ್ತಾಪಿಸಿದ್ದ ಬ್ರಾಡ್, ಶೂಟರ್ ಗಳು ಮುಂದಿನ ಬಾರಿ ಕಮಲಾ ಅವರ ಮೇಲೆ ಗುರಿ ತಪ್ಪಲಾರರು ಎಂದು ವಿಶ್ವಸ ವ್ಯಕ್ತಪಡಿಸಿ ಮಾತನಾಡಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.