Friday, May 15, 2026
Google search engine
Homeವಾಣಿಜ್ಯHDFC ಬ್ಯಾಂಕ್ ನಿಂದ ಹೊಸ ಟೆಕ್ ಅಂಡ್ ಡಿಜಿಟಲ್ ಫ್ಯಾಕ್ಟರಿಗೆ ಚಾಲನೆ

HDFC ಬ್ಯಾಂಕ್ ನಿಂದ ಹೊಸ ಟೆಕ್ ಅಂಡ್ ಡಿಜಿಟಲ್ ಫ್ಯಾಕ್ಟರಿಗೆ ಚಾಲನೆ

ಗೌಹಾಟಿ: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಗೌಹಾಟಿಯಲ್ಲಿ ತನ್ನ ಹೊಸ ಟೆಕ್ ಮತ್ತು ಡಿಜಿಟಲ್ ಫ್ಯಾಕ್ಟರಿ ಉದ್ಘಾಟಿಸಿದೆ.

ಈ ಸೌಲಭ್ಯವು ಸುಧಾರಿತ ತಂತ್ರಜ್ಞಾನ ಅಭಿವೃದ್ಧಿ, ಆವಿಷ್ಕಾರ ಮತ್ತು ಅಸ್ಸಾಂನಲ್ಲಿ ಪ್ರತಿಭೆಯ ಪೋಷಣೆ ಮಾಡುವ ಮೂಲಕ ಎಐ, ಡಿಜಿಟಲ್ ಮತ್ತು ಸೈಬರ್ ಭದ್ರತೆ ಪ್ರತಿಭೆಗಳನ್ನು ರೂಪಿಸಲಿದೆ. ಈ ಸೌಲಭ್ಯವು ಎಚ್.ಡಿ.ಎಫ್.ಸಿ. ಬ್ಯಾಂಕ್ ಅಸ್ಸಾಂನಲ್ಲಿ ಮೊದಲನೆಯದಾಗಿದೆ ಮತ್ತು ರಾಷ್ಟ್ರೀಯವಾಗಿ ನಾಲ್ಕನೆಯದಾಗಿದೆ. ಬ್ಯಾಂಕ್ ಪ್ರಸ್ತುತ ಮುಂಬೈ, ಬೆಂಗಳೂರು ಮತ್ತು ಗುರುಗ್ರಾಮ್ ಗಳಲ್ಲಿ ಟೆಕ್ ಮತ್ತು ಡಿಜಿಟಲ್ ಫ್ಯಾಕ್ಟರಿಗಳನ್ನು ಹೊಂದಿದೆ.

ಈ ಸೌಲಭ್ಯವನ್ನು ಅಸ್ಸಾಂನ ಮಾನ್ಯ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾಸ್ ಸರ್ಮೈನ್ ಅವರು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಎಚ್.ಡಿ.ಎಫ್.ಸಿ. ಬ್ಯಾಂಕ್ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೈಝದ್ ಭರೂಚಾ, ಎಚ್.ಡಿ.ಎಫ್.ಸಿ. ಬ್ಯಾಂಕ್ ಚೀಫ್ ಇನ್ಫರ್ಮೇಷನ್ ಆಫೀಸರ್ ಶ್ರೀ ರಮೇಶ್ ಲಕ್ಷ್ಮಿನಾರಾಯಣ್ ಮತ್ತು ಅಸ್ಸಾಂ ಸರ್ಕಾರದ ಗಣ್ಯರು, ಭಾಗವಹಿಸುವ ಶಿಕ್ಷಣ ಸಂಸ್ಥೆಗಳ ಸದಸ್ಯರು ಮತ್ತು ಎಚ್.ಡಿ.ಎಫ್.ಸಿ. ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸೌಲಭ್ಯವು ರಾಜ್ಯದಲ್ಲಿ ಕುಶಲಿ ವೃತ್ತಿಪರರಿಗೆ ಉದ್ಯೋಗಾವಕಾಶಗಳನ್ನು ಕೂಡಾ ಪುರೈಸುತ್ತಿದ್ದು ಅವರಿಗೆ ನೇರವಾಗಿ ಮುಂದಿನ ತಲೆಮಾರಿನ ತಂತ್ರಜ್ಞಾನಕ್ಕೆ ನೇರ ಕೊಡುಗೆ ನೀಡಲು ಸನ್ನದ್ಧವಾಗಿಸುತ್ತದೆ. ಈ ಬ್ಯಾಂಕ್ ಟೆಕ್ ಮತ್ತು ಡಿಜಿಟಲ್ ಫ್ಯಾಕ್ಟರಿಯಲ್ಲಿ ಸ್ಥಳೀಯ ತಂತ್ರಜ್ಞಾನ ಪ್ರತಿಭೆಗಳನ್ನು ಬಳಸಿಕೊಳ್ಳುವ ಮೂಲಕ ಸಾಮರ್ಥ್ಯಗಳನ್ನು ಸದೃಢಗೊಳಿಸುತ್ತದೆ. ಇದರ ಉದ್ದೇಶ ಎಐ, ಕ್ಲೌಡ್, ಡೇಟಾ ಮತ್ತು ಕೋರ್ ಎಂಜಿನಿಯರಿಂಗ್ ಸುಧಾರಣೆಯಾಗಿದ್ದು ಇದು ರಾಜ್ಯದಲ್ಲಿ ಡಿಜಿಟಲ್ ಉತ್ಪನ್ನ ಸೃಷ್ಟಿಯ ಸಾಮರ್ಥ್ಯಗಳನ್ನು ತೆರೆಯುವ ಗುರಿ ಹೊಂದಿದೆ.

ಬ್ಯಾಂಕ್ ಅಸ್ಸಾಂನ ಮಾನ್ಯ ಮುಖ್ಯಮಂತ್ರಿ ಅಡ್ವಾಂಟೇಜ್ ಅಸ್ಸಾಂ 2.0 ಭಾಗವಾಗಿ ಅಸ್ಸಾಂ ಸರ್ಕಾರದೊಂದಿಗೆ ಸಹಯೋಗ ಹೊಂದಿದೆ. ಈ ಜಂಟಿ ಉಪಕ್ರಮದ ಅಡಿಯಲ್ಲಿ ಎಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಅಸ್ಸಾಂ ಸರ್ಕಾರವು ಶೈಕ್ಷಣಿಕ ಜ್ಞಾನವನ್ನು ಬಿ.ಎಫ್.ಎಸ್.ಐ ಮತ್ತು ಫಿನ್ಟೆಕ್ ವಲಯಗಳಿಗೆ ಸಂಬಂಧಿಸಿದ ರಚನಾತ್ಮಕ ಕೌಶಲ್ಯವೃದ್ಧಿಯ ಪಠ್ಯಕ್ರಮದ ಮೂಲಕ ಉದ್ಯಮದ ಪರಿಣಿತಿಯೊಂದಿಗೆ ನೀಡುತ್ತದೆ.

ಕ್ಯಾಂಪಸ್-ಟು-ಕಾರ್ಪೊರೇಟ್ ಕಾಂಪಿಟೆನ್ಸಿ ಎಂಬ ಧ್ಯೇಯ ಹೊಂದಿರುವ ಈ ಕಾರ್ಯಕ್ರಮವು ಬ್ಯಾಂಕಿಂಗ್ ಮತ್ತು ಫಿನ್ಟೆಕ್ ಉದ್ಯಮದ ಉದ್ಯೋಗದ ಅಗತ್ಯಗಳೊಂದಿಗೆ ಹೊಂದಿಕೊಳ್ಳುತ್ತದೆ. ಈ ಪಠ್ಯಕ್ರಮವು ಅಗತ್ಯ ಬ್ಯಾಂಕಿಂಗ್ ಜ್ಞಾನ ಮತ್ತು ಹೊಸ ತಲೆಮಾರಿನ ಐಟಿ ಕ್ಷೇತ್ರಗಳನ್ನು ಹೊಂದಿದೆ.

ಈ ಕಾರ್ಯಕ್ರಮವು ಸೆಪ್ಟೆಂಬರ್ 2025ರಂದು ಪ್ರಾರಂಭವಾಯಿತು ಮತ್ತು 150ಕ್ಕೂ ವಿದ್ಯಾರ್ಥಿಗಳು ಪ್ರಸ್ತುತ ಈ ಕಾರ್ಯಕ್ರಮದ ಭಾಗವಾಗಿ ತರಬೇತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಉದ್ಯಮಕ್ಕೆ ಸಂಬಂಧಿಸಿದ ಜ್ಞಾನ, ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಹಿರಿಯ ಎಕ್ಸಿಕ್ಯೂಟಿವ್ ಗಳಿಂದ ಪ್ರಾಯೋಗಿಕ ತರಬೇತಿ ಪಡೆಯುತ್ತಾರೆ.

ಈ ಕಾರ್ಯಕ್ರಮದ ಭಾಗವಾಗಿರುವ ವಿದ್ಯಾರ್ಥಿಗಳು 2-4 ತಿಂಗಳ ಅವಧಿಗೆ ಎಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿ ಇಂಟರ್ನ್ ಶಿಪ್ ಪಡೆಯುವ ಮೂಲಕ ಅವರಿಗೆ ಕಾರ್ಪೊರೇಟ್ ಪರಿಸರದಲ್ಲಿ ನಿಜ ಜೀವನದ ಸನ್ನಿವೇಶಗಳಲ್ಲಿ ಶೈಕ್ಷಣಿಕ ಮತ್ತು ತಂತ್ರಜ್ಞಾನದ ಪರಿಕಲ್ಪನೆಗಳನ್ನು ಬಳಸುವುದನ್ನು ಕಲಿಸಲಾಗುತ್ತದೆ.

ಈ ಕುರಿತು ಎಚ್.ಡಿ.ಎಫ್.ಸಿ. ಬ್ಯಾಂಕ್ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೈಝದ್ ಭರೂಚಾ, “ನಾವು ಗೌಹಾಟಿಯಲ್ಲಿ ನಮ್ಮ ಹೊಸ ಟೆಕ್ ಮತ್ತು ಡಿಜಿಟಲ್ ಫ್ಯಾಕ್ಟರಿ ಉದ್ಘಾಟಿಸಲು ಬಹಳ ಸಂತೋಷ ಹೊಂದಿದ್ದೇವೆ. ಎಚ್.ಡಿ.ಎಫ್.ಸಿ. ಬ್ಯಾಂಕ್ ಮತ್ತು ಅಸ್ಸಾಂ ಸರ್ಕಾರವು ಫೆಬ್ರವರಿ 2025ರಲ್ಲಿ ಅಡ್ವಾಂಟೇಜ್ ಅಸ್ಸಾಂ 2.0ರಲ್ಲಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿವೆ ಮತ್ತು ಈ ಸೌಲಭ್ಯವನ್ನು ಒಂದು ವರ್ಷದಲ್ಲಿ ಪ್ರಾರಂಭಿಸಲು ಬಹಳ ಸಂತೋಷ ಹೊದಿದ್ದೇವೆ.

ಇದು ಅಸ್ಸಾಂ ಸರ್ಕಾರದ ಸದೃಢ ಬೆಂಬಲದಿಂದ ಸಾಧ್ಯವಾಗಿದೆ. ಈ ಸೌಲಭ್ಯವು ನಮಗೆ ಡಿಜಿಟಲ್ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಾರಂಭಿಸಲು, ನಮ್ಮ ಐಟಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಈ ಸೌಲಭ್ಯವು ನಮಗೆ ಅಸ್ಸಾಂನಿಂದ ಎಂಜಿನಿಯರಿಂಗ್ ಪ್ರತಿಭೆಯನ್ನು ಆಕರ್ಷಿಸಲು ನೆರವಾಗುವುದಲ್ಲದೆ ಅವರಿಗೆ ಅವರ ಮನೆಗೆ ಹತ್ತಿರದಲ್ಲಿದ್ದು ಬ್ಯಾಂಕಿಂಗ್ ವಲಯದ ಮುಂದಿನ ತಲೆಮಾರಿನ ತಂತ್ರಜ್ಞಾನ ವಿಕಾಸಕ್ಕೆ ಕೊಡುಗೆ ನೀಡಲು ಅವಕಾಶ ಕಲ್ಪಿಸುತ್ತದೆ” ಎಂದರು.

ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಟೆಕ್ ಅಂಡ್ ಡಿಜಿಟಲ್ ಫ್ಯಾಕ್ಟರಿ ಮಾದರಿಯು ಅನುಭವಪೂರ್ವಕ ವಿನ್ಯಾಸ, ಮೊಬೈಲ್ ಮತ್ತು ಕ್ಲೌಡ್ ಎಂಜಿನಿಯರಿಂಗ್, ಎಪಿಐಗಳು ಮತ್ತು ಆರ್ಕೆಸ್ಟ್ರೇಷನ್, ಡೇಟಾ ಮತ್ತು ಜೆನ್ಎಐ ಮತ್ತು ಸೆಕ್ಯೂರ್-ಬೈ-ಡಿಸೈನ್ ಆರ್ಕಿಟೆಕ್ಚರ್ ಒಳಗೊಂಡು ಕೇಂದ್ರಿತ ವಿಶೇಷ ಘಟಕಗಳೊಂದಿಗೆ ಡಿಜಿಟಲ್ ಅನುಷ್ಠಾನದ ಕೇಂದ್ರವಾಗಿರುತ್ತದೆ.

ಬ್ಯಾಂಕ್ 2004ರಲ್ಲಿ ಗೌಹಾಟಿಯಲ್ಲಿ ತನ್ನ ಮೊದಲ ಶಾಖೆ ಪ್ರಾರಂಭಿಸುವ ಮೂಲಕ ತನ್ನ ಪ್ರಯಾಣವನ್ನು ಅಸ್ಸಾಂ ರಾಜ್ಯದಲ್ಲಿ ಪ್ರಾರಂಭಿಸಿದ್ದರಿಂದ ಬ್ಯಾಂಕಿಗೆ ಪ್ರಮುಖ ರಾಜ್ಯವಾಗಿದೆ. ಅಂದಿನಿಂದಲೂ ಬ್ಯಾಂಕ್ 138 ಶಾಖೆಗಳು ಮತ್ತು 248 ಎಟಿಎಂಗಳಿಗೆ ವಿಸ್ತರಿಸಿದೆ (ಡಿಸೆಂಬರ್ 31, 2025ರಂತೆ). ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ (ಎಸ್.ಎಲ್.ಬಿ.ಸಿ.) ವರದಿಯ ಪ್ರಕಾರ ಡಿಸೆಂಬರ್ 31, 2025ಕ್ಕೆ ಅಸ್ಸಾಂನಲ್ಲಿ ಬ್ಯಾಂಕಿನ ಸಿಡಿ ಅನುಪಾತ ಶೇ.85.78ರಷ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments