Friday, May 15, 2026
Google search engine
Homeವಿದೇಶಇರಾನ್ ನಲ್ಲಿ ಲಘು ಭೂಕಂಪನ

ಇರಾನ್ ನಲ್ಲಿ ಲಘು ಭೂಕಂಪನ

ಅಮೆರಿಕ-ಇಸ್ರೇಲ್‌ ಹಾಗೂ ಗಲ್ಫ್‌ ರಾಷ್ಟ್ರಗಳ ವಿರುದ್ಧ ಯುದ್ಧದ ನಡುವೆಯೇ ಇರಾನ್‌ನಲ್ಲಿ ಭೂಕಂಪ ಸಂಭವಿಸಿದೆ.

ಇರಾನ್‌ನ ಗೆರಾಶ್‌ನಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3ರಷ್ಟು ದಾಖಲಾಗಿದೆ. ಸುಮಾರು 10 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮಿಲಿಟರಿ ದಾಳಿಗಳನ್ನು ತೀವ್ರಗೊಳಿಸಿವೆ. ಈ ಪ್ರದೇಶದಲ್ಲಿ ತೀವ್ರ ಸಂಘರ್ಷದ ನಡುವೆ ಭೂಕಂಪ ಸಂಭವಿಸಿದೆ.

ಈಗಾಗಲೇ ಉದ್ವಿಗ್ನಗೊಂಡಿರುವ ಪ್ರಾದೇಶಿಕ ಯುದ್ಧಗಳಿಗೆ ಈ ಕಂಪನವು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಭೂಕಂಪದಿಂದ ಉಂಟಾದ ನಷ್ಟ, ಸಾವು-ನೋವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಯುಎಸ್‌-ಇಸ್ರೇಲ್‌ ಏರ್‌ಸ್ಟ್ರೈಕ್‌ಗೆ ಭಾನುವಾರ ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾಯಿತು. ಇರಾನಿನ ಮಿಲಿಟರಿ ಮತ್ತು ಕಾರ್ಯತಂತ್ರದ ವ್ಯವಸ್ಥೆಗಳ ಮೇಲೆ ವಾಯು ಮತ್ತು ಕ್ಷಿಪಣಿ ದಾಳಿ ನಡೆಸಲಾಗಿದೆ. ಇದು ಮಧ್ಯಪ್ರಾಚ್ಯದಾದ್ಯಂತ ವ್ಯಾಪಕ ಪ್ರತೀಕಾರಕ್ಕೆ ಕಾರಣವಾಯಿತು.

ಮಧ್ಯಪ್ರಾಚ್ಯದಲ್ಲಿ ಹೋರಾಟ ಉಲ್ಬಣಗೊಳ್ಳುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 4 ರಿಂದ 5 ವಾರಗಳಿಗೂ ಹೆಚ್ಚು ಅವಧಿವರೆಗೆ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸುವ ಸಾಮರ್ಥ್ಯವನ್ನು ಅಮೆರಿಕ ಹೊಂದಿದೆ ಎಂದು ಮಾತನಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments