Thursday, May 14, 2026
Google search engine
Homeದೇಶಗಣೇಶೋತ್ಸವ ವೇಳೆ 400 ಕೆಜಿ ಆರ್ ಡಿಎಕ್ಸ್ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ ಅರೆಸ್ಟ್

ಗಣೇಶೋತ್ಸವ ವೇಳೆ 400 ಕೆಜಿ ಆರ್ ಡಿಎಕ್ಸ್ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ ಅರೆಸ್ಟ್

ಮುಂಬೈನಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವ ವೇಳೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಅಶ್ವಿನ್ ಕುಮಾರ್ ಸುಪ್ರಾ (50) ನನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ.

ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಬಳಸಿ ಆರೋಪಿ ಅಶ್ವಿನ್ ಕುಮಾರ್ 35 ವಾಹನಗಳಲ್ಲಿ 400 ಕೆಜಿ ಆರ್ ಡಿಎಕ್ಸ್ ಬಾಂಬ್ ಇರಿಸಿದ್ದಾಗಿ ಬೆದರಿಕೆ ಹಾಕಿದ್ದ.

ತನಿಖೆಯ ಸಮಯದಲ್ಲಿ, ಬೆದರಿಕೆ ಹಾಕಲು ಬಳಸಲಾದ ಫೋನ್ ಮತ್ತು ಸಿಮ್ ಅನ್ನು ಸಹ ಅಪರಾಧ ವಿಭಾಗ ವಶಪಡಿಸಿಕೊಂಡಿದೆ. ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಗುತ್ತಿದೆ. ಮುಂಬೈ ತಲುಪಿದ ಬಳಿಕ ಹೆಚ್ಚಿನ ವಿಚಾರಣೆ ನಡೆಯಲಿದೆ.

ಪಾಕಿಸ್ತಾನ ಲಷ್ಕರ್-ಎ-ಜಿಹಾದಿ ಸಂಘಟನೆಯ 14 ಉಗ್ರರು ಭಾರತ ಪ್ರವೇಶಿಸಿದ್ದಾರೆ. 400 ಕೆಜಿ ಆರ್‌ಡಿಎಕ್ಸ್ ಸ್ಫೋಟಿಸಿ ಜನರನ್ನ ಕೊಲ್ಲಲಿದ್ದಾರೆ. ಅಲ್ಲದೇ ನಗರಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್ ಸ್ಫೋಟಿಸಲಾಗುವುದು ಎಂದು ಆರೋಪಿ ಅಶ್ವಿನ್ ಕುಮಾರ್ ಮುಂಬೈ ಸಂಚಾರ ಪೊಲೀಸ್ ಠಾಣೆಗೆ ಸಂದೇಶ ಕಳುಹಿಸಿದ್ದ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments