Monday, June 29, 2026
Google search engine
Homeಕ್ರೀಡೆCAPTIAN COOL `ಕ್ಯಾಪ್ಟನ್ ಕೂಲ್’ ಟ್ರೇಡ್ ಮಾರ್ಕ್ ಗೆ ಧೋನಿ ಅರ್ಜಿ!

CAPTIAN COOL `ಕ್ಯಾಪ್ಟನ್ ಕೂಲ್’ ಟ್ರೇಡ್ ಮಾರ್ಕ್ ಗೆ ಧೋನಿ ಅರ್ಜಿ!

ಕ್ರಿಕೆಟ್ ಜಗತ್ತಿನಲ್ಲಿ `ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತರಾದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ `ಕ್ಯಾಪ್ಟನ್ ಕೂಲ್’ ಟ್ರೇಡ್ ಮಾರ್ಕ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಪಂದ್ಯದ ವೇಳೆ ಎಂತಹ ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆಯಿಂದ ಇರುತ್ತಿದ್ದ ಧೋನಿಯನ್ನು ಕ್ಯಾಪ್ಟನ್ ಕೂಲ್ ಎಂದೇ ಕರೆಯಲಾಗುತ್ತಿತ್ತು. ಇದೀಗ ಇದೇ ಹೆಸರನ್ನು ಟ್ರೇಡ್ ಮಾರ್ಕ್ ಆಗಿ ಬಳಸಿಕೊಳ್ಳಲು ಧೋನಿ ನಿರ್ಧರಿಸಿದ್ದಾರೆ.

ಟ್ರೇಡ್ ಮಾರ್ಕ್ ನೋಂದಣಿ ಪೋರ್ಟಲ್ ಧೋನಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಜೂನ್ 5ರಂದು ಧೋನಿ ಅರ್ಜಿ ಸಲ್ಲಿಸಿದ್ದಾರೆ.

ಕ್ರೀಡಾ ತರಬೇತಿ, ಕ್ರೀಡಾ ಸೌಲಭ್ಯಗಳ ಪೂರೈಕೆ, ಕ್ರೀಡಾ ಕೋಚಿಂಗ್ ಮತ್ತು ಸೇವೆಗಳ ಅಡಿಯಲ್ಲಿ ಧೋನಿ ಕ್ಯಾಪ್ಟನ್ ಕೂಲ್ ಟ್ರೇಡ್ ಮಾರ್ಕ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಧೋನಿ ಹೊಸ ಕ್ರೀಡೆಗೆ ಸಂಬಂಧಿಸಿದ ಸಂಸ್ಥೆ ಆರಂಭಿಸುವ ಸುಳಿವು ದೊರೆತಿದೆ.

ವಿಶೇಷ ಅಂದರೆ ಕ್ಯಾಪ್ಟನ್ ಕೂಲ್ ಟ್ರೇಡ್ ಮಾರ್ಕ್ ಗೆ ಪ್ರಭಾ ಸ್ಕಿಲ್ ಸ್ಪೋರ್ಟ್ಸ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಆದರೆ ಈ ಅರ್ಜಿಯನ್ನು ಪರಿಶೀಲನಾ ಹಂತದಲ್ಲಿಯೇ ಇಡಲಾಗಿದೆ.

ಇತ್ತೀಚೆಗಷ್ಟೇ ಧೋನಿಗೆ ಆಲ್ ಆಫ್ ಫೇಮ್ ಪ್ರಶಸ್ತಿಯನ್ನು ಐಸಿಸಿ ಪ್ರಕಟಿಸಿತ್ತು. ಧೋನಿ ಅಲ್ಲದೇ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಮತ್ತು ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ಅವರಿಗೂ ಆಲ್ ಆಫ್ ಫೇಮ್ ಗೌರವ ಪ್ರಕಟಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments