Tuesday, May 19, 2026
Google search engine
Homeಜಿಲ್ಲಾ ಸುದ್ದಿಮೈಸೂರು ಚಾಮುಂಡೇಶ್ವರಿ ಉಡುಗೊರೆ ಕಾಳಸಂತೆಯಲ್ಲಿ ಮಾರಾಟ: ಸ್ನೇಹಮಯಿ ಕೃಷ್ಣ ಗಂಭೀರ ಆರೋಪ

ಮೈಸೂರು ಚಾಮುಂಡೇಶ್ವರಿ ಉಡುಗೊರೆ ಕಾಳಸಂತೆಯಲ್ಲಿ ಮಾರಾಟ: ಸ್ನೇಹಮಯಿ ಕೃಷ್ಣ ಗಂಭೀರ ಆರೋಪ

ಮೈಸೂರು: ಚಾಮುಂಡಿಗೆ ಉಡುಗೊರೆಯಾಗಿ ಬಂದ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಚಾಮುಂಡಿಬೆಟ್ಟದ ಕಾರ್ಯದರ್ಶಿ ರೂಪಾ ವಿರುದ್ಧ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ವಿಡಿಯೋ ಸಮೇತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

ದೇವಿಗೆ ಉಡುಗೊರೆಯಾಗಿ ಬಂದ ಸೀರೆಗಳನ್ನು ಕಾರ್ಯದರ್ಶಿ ರೂಪಾ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಯುವಕನೊಬ್ಬ ಕಾರಿಗೆ ಸೀರೆ ತುಂಬಿಸಿಕೊಂಡು ಹೋಗುವ ವಿಡಿಯೋ ಸಮೇತ ಕೆಆರ್ ಪೊಲೀಸ್ ಠಾಣೆಗೆ ಸ್ನೇಹಮಯಿ ಕೃಷ್ಣ ಇದೀಗ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?

ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ನೀಡುವ ಲಕ್ಷಾಂತರ ಮತ್ತು ಸಾವಿರಾರು ರೂಪಾಯಿ ಮೌಲ್ಯದ ಸೀರೆಗಳನ್ನು ನೌಕರರ ಮೂಲಕ ಕಳ್ಳತನ ಮಾಡುತ್ತಿರುವ ದೇವಸ್ಥಾನದ ಕಾರ್ಯದರ್ಶಿ ರೂಪ ರವರು ಸದರಿ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಮಾರಾಟ ಮಾಡಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು, ಸರ್ಕಾರಕ್ಕೆ ವಂಚಿಸುವ ಮೂಲಕ ಅಪರಾಧಿಕ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಇವರಿಗೆ ದೇವಸ್ಥಾನದ ಕೆಲವು ಅಧಿಕಾರಿ ಮತ್ತು ನೌಕರರು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನನಗೆ ಇತ್ತೀಚೆಗೆ ದೊರೆತಿರುವ ಎರಡು ವಿಡಿಯೋಗಳನ್ನು “ಚಾಮುಂಡಿ ಬೆಟ್ಟ” ಎಂದು ಬರೆದಿರುವ ಸಿ.ಡಿ.ಯಲ್ಲಿ ಹಾಕಿ ಈ ದೂರರ್ಜಿಯೊಂದಿಗೆ ಲಗತ್ತಿಸಿರುತ್ತೇನೆ. ಆ ಎರಡು ವೀಡಿಯೋಗಳನ್ನು ವೀಕ್ಷಿಸಿದಾಗ, ಒಂದು ವಿಡಿಯೋದಲ್ಲಿ, ಹಸಿರು ಬಣ್ಣದ ಬಟ್ಟೆಯೊಂದರಲ್ಲಿ ಸೀರೆಗಳನ್ನು ತೆಗೆದುಕೊಂಡು ಬರುವ ಯುವಕನೋರ್ವ, ದೇವಸ್ಥಾನದ ಕಚೇರಿಗೆ ತೆಗೆದುಕೊಂಡು ಹೋಗುವುದು ಕಂಡು ಬರುತ್ತದೆ.

ಮತ್ತೊಂದು ವಿಡಿಯೋದಲ್ಲಿ ಸದರಿ ಹಸಿರು ಬಣ್ಣದ ಬಟ್ಟೆಯೊಂದರಲ್ಲಿರುವ ಸೀರೆಗಳನ್ನು ಕಚೇರಿಯಿಂದ ತೆಗೆದುಕೊಂಡು ಬರುವ ಯುವಕ ಅದನ್ನು ಕಾರ್ಯದರ್ಶಿಗಳ ಕಾರಿನ ಡಿಕ್ಕಿಯಲ್ಲಿ ಹಾಕುವುದು ಕಂಡು ಬರುತ್ತದೆ.

ಭಕ್ತರು ದೇವಸ್ಥಾನಕ್ಕೆ (ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ) ನೀಡಿದ ಸೀರೆಗಳು ಎಷ್ಟು? ಅವುಗಳ ಸಂಪೂರ್ಣ ಲೆಕ್ಕವನ್ನು ಸರ್ಕಾರಕ್ಕೆ ನೀಡಿರುತ್ತಾರೆಯೆ? ಎಂಬ ಅಂಶಗಳ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments