Monday, June 8, 2026
Google search engine
Homeದೇಶರಾಜಸ್ಥಾನದ ಖ್ಯಾತ ಧಾರ್ಮಿಕ ಉಪನ್ಯಾಸಕಿ ಸಾಧ್ವಿ ನಿಗೂಢ ಸಾವು!

ರಾಜಸ್ಥಾನದ ಖ್ಯಾತ ಧಾರ್ಮಿಕ ಉಪನ್ಯಾಸಕಿ ಸಾಧ್ವಿ ನಿಗೂಢ ಸಾವು!

ರಾಜಸ್ಥಾನದ ಖ್ಯಾತ ಧಾರ್ಮಿಕ ಕಥಾ ನಿರೂಪಕಿ ಸಾಧ್ವಿ ಪ್ರೇಮ್ ಬೈಸಾ ನಿಗದೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸದೇ ಅಂತ್ಯಕ್ರಿಯೆಗೆ ಮುಂದಾಗಿದ್ದರಿಂದ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.

ಸಾಧ್ವಿ ಪ್ರೇಮ್ ಬೈಸಾ ಕಳೆದೆರಡು ದಿನಗಳಿಂದ ಅಸ್ವಸ್ಥರಾಗಿದ್ದು, ಆಶ್ರಮದ ವೈದ್ಯ ಇಂಜೆಕ್ಷನ್ ನೀಡಿದ ನಂತರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತು. ಕೂಡಲೇ ಪ್ರೇಮ್ ಬೈಸಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಪ್ರೇಮ್ ಬೈಸಾ ಅವರನ್ನು ತಂದೆ ಪಾಲ್ ರಸ್ತೆಯಲ್ಲಿರುವ ಪ್ರೇಕ್ಷಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಚಿಕಿತ್ಸೆ ಆರಂಭಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪ್ರೇಮ್ ಬೈಸಾಶ ನಿಧನದ ಸುದ್ದಿ ಅವರ ಬೆಂಬಲಿಗರಲ್ಲಿ ಆಘಾತ ಉಂಟು ಮಾಡಿದ್ದು, ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ನಿರ್ದೇಶಕ ಡಾ. ಪ್ರವೀಣ್ ಜೈನ್ ಸಾವು ದೃಢಪಡಿಸಿದ ಹಿನ್ನೆಲೆಯಲ್ಲಿ ಶಿಷ್ಟಾಚಾರದ ಪ್ರಕಾರ ಶಾಸ್ತ್ರಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.

ಶವವನ್ನು ಮರಣೋತ್ತರ ಪರೀಕ್ಷೆಗೆ ಎಂಡಿಎಂ ಆಸ್ಪತ್ರೆಗೆ ಕೊಂಡೊಯ್ಯಲು ಕುಟುಂಬಕ್ಕೆ ಸೂಚಿಸಲಾಯಿತು. ಆದರೆ ಕುಟುಂಬದವರು ಹಾಗೆ ಮಾಡದೇ ಬೋರನಾಡದಲ್ಲಿರುವ ಅವರ ಆಶ್ರಮಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರಕ್ಕೆ ಮುಂದಾದರು.

ಕುಟುಂಬದವರ ಈ ಅನುಮಾನಸ್ಪದ ನಡೆಯ ಮಾಹಿತಿ ಪಡೆದ ಬೋರನಾಡ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಹೇಮರಾಜ್ ಆಶ್ರಮಕ್ಕೆ ತಲುಪಿ ಸಾಧ್ವಿ ಪ್ರೇಮ್ ಬೈಸಾ ಕೊಠಡಿ ಬಾಗಿಲು ಮುಚ್ಚಿ, ನಂತರ, ತಡರಾತ್ರಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಡಿಎಂ ಆಸ್ಪತ್ರೆಗೆ ಕಳುಹಿಸಿದರು.

ಸಾಧ್ವಿ ಸಾವಿನ ಸುಮಾರು ನಾಲ್ಕು ಗಂಟೆಗಳ ನಂತರ, ರಾತ್ರಿ 9.30 ರ ಸುಮಾರಿಗೆ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆತ್ಮಹತ್ಯೆ ಕುರಿತ ಪೋಸ್ಟ್ ಕಾಣಿಸಿಕೊಂಡಾ ಪ್ರಕರಣ ತಿರುವು ಪಡೆದಿದ್ದು,  ಪೋಸ್ಟ್‌ನಲ್ಲಿ “ಅಗ್ನಿ ಪರೀಕ್ಷೆ,” “ವಿದಾಯ,” ಮತ್ತು “ನ್ಯಾಯ” ಎಂದು ಉಲ್ಲೇಖಿಸಲಾಗಿದೆ.

“ನಾನು ಪ್ರತಿ ಕ್ಷಣವೂ ಸನಾತನ ಧರ್ಮದ ಪ್ರಚಾರಕ್ಕಾಗಿ ಬದುಕಿದ್ದೇನೆ. ನನ್ನ ಜೀವನದುದ್ದಕ್ಕೂ, ವಿಶ್ವದ ಯೋಗ ಗುರುಗಳಾದ ಆದಿ ಜಗದ್ಗುರು ಶಂಕರಾಚಾರ್ಯರ ಮತ್ತು ಪೂಜ್ಯ ಸಂತರು ಮತ್ತು ಋಷಿಗಳ ಆಶೀರ್ವಾದವನ್ನು ಪಡೆದಿದ್ದೇನೆ. ನಾನು ಆದಿ ಗುರು ಶಂಕರಾಚಾರ್ಯರಿಗೆ ಮತ್ತು ದೇಶದ ಅನೇಕ ಮಹಾನ್ ಸಂತರು ಮತ್ತು ಋಷಿಗಳಿಗೆ ಪತ್ರಗಳನ್ನು ಬರೆದಿದ್ದೇನೆ, ಅಗ್ನಿ ಪರೀಕ್ಷೆಯನ್ನು ಕೋರಿ. ಆದರೆ ಪ್ರಕೃತಿ ಏನು ಕಾಯ್ದಿರಿಸಿದೆ?” ಪೋಸ್ಟ್ ಹಾಕಲಾಗಿದೆ.

ನಾನು ಈ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ. ಆದರೆ ನನಗೆ ದೇವರು ಮತ್ತು ಪೂಜ್ಯ ಸಂತರು ಮತ್ತು ಋಷಿಗಳಲ್ಲಿ ಸಂಪೂರ್ಣ ನಂಬಿಕೆ ಇದೆ. ನನ್ನ ಜೀವಿತಾವಧಿಯಲ್ಲಿ ಇಲ್ಲದಿದ್ದರೆ, ನನ್ನ ಮರಣದ ನಂತರ ನನಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.

ಸಾಧ್ವಿ ಸಾವಿನ ನಂತರ ಆಕೆಯ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಯಾರು ವಹಿಸಿಕೊಂಡಿದ್ದರು ಮತ್ತು ಪೋಸ್ಟ್ ಯಾರು ಮಾಡಿದ್ದು ಎಂಬುದು ನಿಗೂಢವಾಗಿದೆ. ಅಥವಾ ಸಾಧ್ವಿ ಸೂಚನೆ ಮೇರೆಗೆ ಬೇರೆ ಯಾರಾದರೂ ಈ ಪೋಸ್ಟ್ ಮಾಡಿದ್ದಾರೆಯೇ ಎಂಬ ಅನುಮಾನ ಕಾಡತೊಡಗಿದೆ.

ಸಾಧ್ವಿ ತಂದೆ ಆರಂಭದಲ್ಲಿ ಪೊಲೀಸ್ ದೂರು ದಾಖಲಿಸಲು ಅಥವಾ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲು ಹಿಂಜರಿದಿರುವುದು ಹಾಗೂ ಆಸ್ಪತ್ರೆಯ ಆಂಬ್ಯುಲೆನ್ಸ್ ಕೂಡ ನಿರಾಕರಿಸಿದ್ದಾರೆ. ಬದಲಿಗೆ ದೇಹವನ್ನು ತಮ್ಮ ವೈಯಕ್ತಿಕ ವಾಹನದಲ್ಲಿ ಆಶ್ರಮಕ್ಕೆ ಹಿಂತಿರುಗಿಸಲು ಆಯ್ಕೆ ಮಾಡಿಕೊಂಡರು. ಇಂಜೆಕ್ಷನ್ ನೀಡಿದ ವ್ಯಕ್ತಿಯ ವಿರುದ್ಧ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ವೈದ್ಯಕೀಯ ಮಂಡಳಿಯಿಂದ ನಡೆಸಲ್ಪಡುವ ಮರಣೋತ್ತರ ಪರೀಕ್ಷೆಯು ಕಸ್ಟಡಿ ಸರಪಳಿಯನ್ನು ಕಾಪಾಡಿಕೊಳ್ಳಲು ಮತ್ತು ಸಾವಿನ ನಿಖರವಾದ ಕಾರಣವನ್ನು ನಿರ್ಧರಿಸಲು ಅತ್ಯಗತ್ಯ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ, ಅದು ಇಂಜೆಕ್ಷನ್‌ಗೆ ಪ್ರತಿಕ್ರಿಯೆಯಿಂದ ಉಂಟಾಗಿದೆಯೇ ಅಥವಾ ಇತರ ಕಾರಣಗಳಿಂದ ಉಂಟಾಗಿದೆಯೇ ಎಂಬುದನ್ನು ನಿರ್ಧರಿಸಲು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments