Monday, May 25, 2026
Google search engine
Homeದೇಶ50,000 ಸರ್ಕಾರಿ ನೌಕರರ 230 ಕೋಟಿ ರೂ. ಬೃಹತ್ ಹಗರಣ ಬೆಳಕಿಗೆ!

50,000 ಸರ್ಕಾರಿ ನೌಕರರ 230 ಕೋಟಿ ರೂ. ಬೃಹತ್ ಹಗರಣ ಬೆಳಕಿಗೆ!

50 ಸಾವಿರ ಸರ್ಕಾರಿ ನೌಕರರಿಗೆ 6 ತಿಂಗಳಿಂದ ವೇತನವೇ ನೀಡದೇ 230 ಕೋಟಿ ರೂ. ವಂಚಿಸಿದ ಬೃಹತ್ ಹಗರಣ ಮಧ್ಯಪ್ರದೇಶದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶ ಸರ್ಕಾರದಲ್ಲಿನ ಒಟ್ಟಾರೆ ಸರ್ಕಾರಿ ನೌಕರರ ಪೈಕಿ ಶೇ.9ರಷ್ಟು ಮಂದಿಗೆ ವೇತನವೇ ನೀಡದೇ ವಂಚಿಸಲಾಗಿದೆ. ದಾಖಲೆಗಳ ಪ್ರಕಾರ ನೌಕರರ ಹೆಸರು, ಗುರುತು ಪತ್ರ, ಗುರುತಿನ ಸಂಖ್ಯೆ ಎಲ್ಲವೂ ನಮೂದಾಗಿದೆ. ಆದರೆ ಕೆಲವು ಕಾರಣಗಳನ್ನು ನೀಡಿ ಇಷ್ಟು ದೊಡ್ಡ ಸಂಖ್ಯೆಯ ನೌಕರರಿಗೆ ವೇತನವೇ ನೀಡದಿರುವುದು ದೃಢಪಟ್ಟಿದೆ.

ಈ ನೌಕರರಿಗೆ ವೇತನ ರಹಿತ ರಜೆ ಪಡೆದಿದ್ದರೋ ಅಥವಾ ಅಮಾನತು ಮಾಡಲಾಗಿದೆಯೋ ಅಥವಾ ಇನ್ನಾವ ಕಾರಣದಿಂದ ವೇತನ ನೀಡಲಾಗಿಲ್ಲ ಎಂಬ ಬಗ್ಗೆ ಮಾಹಿತಿಯೇ ಇಲ್ಲದೇ ಇದೊಂದು ನಿಗೂಢ ಪ್ರಕರಣವಾಗಿ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿ ಪ್ರಕರಣದ ಕುರಿತು ಹಣಕಾಸು ಇಲಾಖೆಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. 6000 ಡಿಡಿಒಗಳ ಕೆಲಸದ ಮೇಲೆ ನಿಗಾ ವಹಿಸಲಾಗಿದ್ದು, ಅವರ ಸೇವೆ ಮೇಲೆ ತೂಗುಗತ್ತಿ ಬೀಳುವ ಸಾಧ್ಯತೆ ಇದೆ. 6000 ಡಿಡಿಒಗಳಿಗೆ 15 ದಿನಗಳಲ್ಲಿ 230 ಕೋಟಿ ರೂ. ವೇತನ ಬಿಡುಗಡೆ ಆಗಿದ್ದರೂ ನೌಕರರಿಗೆ ನೀಡದೇ ಇರುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ನಾವು ಪ್ರತಿದಿನವೂ ನೌಕರರ ವೇತನದ ಬಗ್ಗೆ ಗಮನ ಹರಿಸುತ್ತಿರುತ್ತೇವೆ. ಪರಿಶೀಲನೆ ವೇಳೆ ವೇತನ ಪಾವತಿ ಆಗದೇ ಹಣ ಬಳಕೆ ಆಗಿರುವ ಬಗ್ಗೆ ಗಮನ ಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿದ್ದೇವೆ. ಅಧಿಕಾರಿಗಳಿಗೆ ನೀಡಿದ ಗಡುವು ಮುಗಿಯುತ್ತಾ ಬಂದಿದೆ ಎಂದು ಸರ್ಕಾರದ ಖಜಾನೆಯ ಕಮಿಷನರ್ ಭಾಸ್ಕರ್ ಲಷ್ಕರ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments