Tuesday, May 26, 2026
Google search engine
Homeದೇಶದೇಶದ ಮೊದಲ LPG ATMಗೆ ಚಾಲನೆ: 3 ನಿಮಿಷದಲ್ಲೇ ಸಿಗುತ್ತೆ ಗ್ಯಾಸ್‌ ಸಿಲಿಂಡರ್!‌

ದೇಶದ ಮೊದಲ LPG ATMಗೆ ಚಾಲನೆ: 3 ನಿಮಿಷದಲ್ಲೇ ಸಿಗುತ್ತೆ ಗ್ಯಾಸ್‌ ಸಿಲಿಂಡರ್!‌

ಹಣ, ಚಿನ್ನ, ಹಾಲು.. ಹೀಗೆ ಏನೆಲ್ಲಾ ಎಟಿಎಂ ನಲ್ಲಿ ಪಡೆಯಬಹುದಿತ್ತು. ಈಗ ಹೊಸದಾಗಿ ಎಟಿಎಂನಲ್ಲೂ ಗ್ಯಾಸ್‌ ಸಿಲಿಂಡರ್‌ ಪಡೆಯಬಹುದಾಗಿದೆ. ನಂಬಲು ಅಸಾಧ್ಯವಾದರೂ ಇದು ನಿಜ.

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆ ದೇಶದಲ್ಲೇ ಮೊದಲ ಎಲ್‌ ಪಿಜಿ ಎಟಿಎಂ ಅನ್ನು ಉತ್ತರ ಪ್ರದೇಶದ ಗುರ್‌ ಗಾಂವ್‌ ನಲ್ಲಿ ಆರಂಭಿಸಿದೆ.

ವರ್ಷದ 365 ದಿನಗಳ ಕಾಲ ದಿನದ 24 ಗಂಟೆ ಈ ಎಟಿಎಂ ಚಾಲನೆಯಲ್ಲಿ ಇರುತ್ತದೆ. ಈ ಎಟಿಎಂ ನಲ್ಲಿ 2ರಿಂದ 3 ನಿಮಿಷದಲ್ಲಿ ಗ್ಯಾಸ್‌ ಸಿಲಿಂಡರ್‌ ಪಡೆಯಬಹುದಾಗಿದೆ.

ಸ್ಥಳೀಯ ನಿವಾಸಿಗಳು ಸೂಕ್ತ ದಾಖಲೆ ಪತ್ರಗಳೊಂದಿಗೆ ಸಹಿ ಹಾಕಿದ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮೊಬೈಲ್‌ ನಂಬರ್‌ ಗೆ ಬರುವ ಓಟಿಪಿ ನೀಡಿದರೆ ಕ್ಯೂ ಅಂಡ್‌ ಕೋರ್‌ ನೀಡಿ ತಮಗೆ ಬೇಕಾದ ಗ್ಯಾಸ್‌ ಸಿಲಿಂಡರ್‌ ವಿವರ ನೀಡಬೇಕು. ಎಲ್ಲಾ ದಾಖಲಾತಿಗಳು ಪೂರ್ಣಗೊಂಡ ಕೆಲವೇ ನಿಮಿಷಗಳಲ್ಲಿ ಖಾಲಿಯಾದ ಗ್ಯಾಸ್‌ ಸಿಲಿಂಡರ್ ನೀಡಿ ಭರ್ತಿಯಾದ ಗ್ಯಾಸ್‌ ಸಿಲಿಂಡರ್ ಪಡೆಯಬಹುದು.‌

ಗುರ್‌ ಗಾಂವ್‌ ನ ಸೋಹನಾ ಪ್ರದೇಶದ ಸೆಕ್ಟರ್‌ 33ರ ಬಳಿಯ ಸೆಂಟ್ರಲ್‌ ಪಾರ್ಕ್‌ ಫ್ಲವರ್‌ ವ್ಯಾಲಿ ಸೊಸೈಟಿ ಬಳಿ ಎಲ್‌ ಪಿಜಿ ಎಟಿಎಂ ಅಳವಡಿಸಲಾಗಿದೆ. ಈ ಗ್ಯಾಸ್‌ ಸಿಲಿಂಡರ್‌ ಗಳು ಉತ್ತಮ ಗುಣಮಟ್ಟದ್ದೂ ಆಗಿದೆ. ಗ್ರಾಹಕರನ್ನು ಸೆಳೆಯುತ್ತಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ ಕೊರತೆ ಉಂಟಾಗಿದ್ದು, ಜನರು ಗ್ಯಾಸ್‌ ಸಿಲಿಂಡರ್‌ ಗಾಗಿ ಮುಗಿಬೀಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್‌ ಪಿಜಿ ಎಟಿಎಂ ಆರಂಭಿಸಿದರೆ ಜನರು ಅದರ ಪ್ರಯೋಜನ ಪಡೆಯದೇ ಬಿಡುವರೇ?\

ಪ್ರಸ್ತುತ ಈ ಎಟಿಎಂನಲ್ಲಿ 10 ಕೆಜಿಯ ಸಿಲಿಂಡರ್‌ ಮಾತ್ರ ಲಭ್ಯವಿದ್ದು, ಗ್ಯಾಸ್‌ ಭರ್ತಿ ಮಾಡಲು 2ರಿಂದ 3 ನಿಮಿಷ ಸಾಕಾಗುತ್ತದೆ. ಖಾಲಿ ಗ್ಯಾಸ್‌ ಸಿಲಿಂಡರ್‌ ಭರ್ತಿಯಾದ ಕೂಡಲೇ ವಿತರಣೆಗೆ ಇದು ರೆಡಿ ಆಗಿರುತ್ತದೆ.
ಸೆಂಟ್ರಲ್ ಪಾರ್ಕ್ ಫ್ಲವರ್ ವ್ಯಾಲಿ ಸೊಸೈಟಿಯ ನಿವಾಸಿಗಳಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ ಎಂದು ಸೊಸೈಟಿಯ ಸೌಲಭ್ಯ ಉಪ ವ್ಯವಸ್ಥಾಪಕ ಅಮಿತ್ ಖತಾನಾ ಹೇಳಿದರು.

ಏಕೆಂದರೆ ಅವರು ಈಗ ರಾತ್ರಿಯಲ್ಲಿ ಅಥವಾ ರಜಾದಿನಗಳಲ್ಲಿಯೂ ಯಾವುದೇ ಏಜೆಂಟ್‌ಗಾಗಿ ಕಾಯದೆ ಸಿಲಿಂಡರ್‌ಗಳನ್ನು ಪಡೆಯಬಹುದು.

“ಈ ಯಂತ್ರವು ತುಂಬಾ ಅನುಕೂಲಕರವಾಗಿದೆ. ಹಿಂದೆ, ನೀವು ವಿತರಣೆಗಾಗಿ ಕಾಯಬೇಕಾಗಿತ್ತು, ಆದರೆ ಈಗ ನೀವು ಹೋಗಿ ಕೇವಲ ಎರಡು ನಿಮಿಷಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಬಹುದು. ಈ ಪೈಲಟ್ ಯೋಜನೆ ಯಶಸ್ವಿಯಾದರೆ, ಇದನ್ನು ಇತರ ನಗರಗಳು ಮತ್ತು ವಸತಿ ವಸಾಹತುಗಳಿಗೆ ವಿಸ್ತರಿಸಬಹುದು” ಎಂದು ಖತಾನಾ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments