ಭಾರತೀಯ ಕೋಸ್ಟ್ ಗಾರ್ಡ್ ಗೆ ಸೇರಿದ ಅತ್ಯಾಧುನಿಕ ಹಗುರ ಹೆಲಿಕಾಫ್ಟರ್ ಗುಜರಾತ್ ನ ಪೋರ್ ಬಂದರ್ ನಲ್ಲಿ ಪತನಗೊಂಡಿದ್ದು, ಮೂವರು ಯೋಧರು ಮೃತಪಟ್ಟಿದ್ದಾರೆ.
ಭಾರತೀಯ ಸೇನೆ ಬಳಸುವ ಎಎಲ್ ಎಚ್ ಧ್ರುವ ಹೆಲಿಕಾಫ್ಟರ್ ಖಾಲಿ ಮೈದಾನದಲ್ಲಿ ಪತನಗೊಂಡು ಸ್ಫೋಟಗೊಂಡಿದೆ. ಹೆಲಿಕಾಫ್ಟರ್ ನಲ್ಲಿದ್ದ ಎಲ್ಲಾ ಮೂವರು ಯೋಧರು ಮೃತಪಟ್ಟಿದ್ದು, ದುರಂತದ ತನಿಖೆಗೆ ಆದೇಶಿಸಲಾಗಿದೆ.
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಹಾಗೂ ಕೋಸ್ಟ್ ಗಾರ್ಡ್ ಬಳಿ ಸೇರಿದಂತೆ ಒಟ್ಟಾರೆ 325 ಎಎಲ್ ಎಚ್ ಧ್ರುವ ಹೆಲಿಕಾಫ್ಟರ್ ಗಳು ಇದ್ದು, 2023ರಲ್ಲಿ ಸಂಭವಿಸಿದ ಹೆಲಿಕಾಫ್ಟರ್ ಪತನಗಳ ಹಿನ್ನೆಲೆಯಲ್ಲಿ ಎಲ್ಲಾ ಹೆಲಿಕಾಫ್ಟರ್ ಗಳ ತಾಂತ್ರಿಕ ದೋಷಗಳ ತನಿಖೆಗೆ ಆದೇಶಿಸಲಾಗಿದೆ. ಆದರೆ ಇದುವರೆಗೆ ಈ ಸಂಬಂಧ ವರದಿ ಬಂದಿಲ್ಲ.