Wednesday, 18 November 2026 — Kannadavahini
BREAKING NEWS
ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು
ದೇಶ

ರಷ್ಯಾ ಜೊತೆ ರಕ್ಷಣೆ ಸೇರಿ ಉದ್ಯಮ ವಲಯದಲ್ಲಿ ಒಪ್ಪಂದ: ಟ್ರಂಪ್‌ ಸುಂಕ ಏರಿಕೆಗೆ ಭಾರತ ತಿರುಗೇಟು

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 27 ವೀಕ್ಷಣೆಗಳು
modi trump

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿ ಶೇ.25ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಭಾರತ ಮತ್ತು ರಷ್ಯಾ ಔದ್ಯೋಗಿಕ ವಲಯದಲ್ಲಿ ಪರಸ್ಪರ ಸಹಕಾರಿ ಕುರಿತು ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.

ಇದೇ ವೇಳೆ ಭಾರತಕ್ಕೆ ವಾರ್ಷಾಂತ್ಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಭೇಟಿ ನೀಡುವ ವೇಳೆ ಐತಿಹಾಸಿಕ ಒಪ್ಪಂದಗಳು ನಡೆಯಲಿವೆ.

ಅಲೂಮಿನಿಯಂ, ರಸಗೊಬ್ಬರ, ರೈಲ್ವೇಸ್ ಮತ್ತು ಮೈನಿಂಗ್ ಟೆಕ್ನಾಲಜಿ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ಪ್ರೋಟೋಕಾಲ್​ಗೆ ಸಹಿ ಹಾಕಲಾಗಿದೆ. ಭಾರತ ರಷ್ಯಾ ಆಧುನೀಕರಣ ಮತ್ತು ಔದ್ಯಮಿಕ ಸಹಕಾರದ ಮೇಲಿನ ಕಾರ್ಯಕಾರಿ ಗುಂಪಿನ 11ನೇ ಅಧಿವೇಶನದ ವೇಳೆ ಈ ಬೆಳವಣಿಗೆ ನಡೆದಿದೆ.

ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಸಹಕಾರದ ಭಾರತ-ರಷ್ಯಾ ಅಂತರಸರ್ಕಾರ ಆಯೋಗದ ಚೌಕಟ್ಟಿನ ಅಡಿಯಲ್ಲಿ ದೆಹಲಿಯ ವಾಣಿಜ್ಯ ಭವನದಲ್ಲಿ ಬುಧವಾರ ಸಭೆ ನಡೆಯಿತು. 10ನೇ ಅಧಿವೇಶನದ ಬಳಿಕ ಎರಡೂ ದೇಶಗಳ ನಡವಿನ ಸಂಬಂಧದಲ್ಲಿ ಎಷ್ಟು ವೃದ್ಧಿಯಾಗಿದೆ ಎಂಬುದನ್ನು ಈ ಸಭೆಯಲ್ಲಿ ಅವಲೋಕಿಸಲಾಯಿತು.

ಡಿಪಿಐಐಟಿ ಇಲಾಖೆಯ ಕಾರ್ಯದರ್ಶಿಯಾದ ಅಮರ್​ದೀಪ್ ಸಿಂಗ್ ಭಾಟಿಯಾ, ರಷ್ಯನ್ ಉಪ ಸಚಿವ ಅಲೆಕ್ಸೇ ಗ್ರುಜ್​ಡೆವ್ ಅವರು ಈ 11ನೇ ಸೆಷನ್​ನ ನೇತೃತ್ವ ವಹಿಸಿದ್ದರು. ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಿಗೆ ಹೆಚ್ಚು ಗಮನ ಕೊಡಲಾಗಿದೆ.

ಸಣ್ಣ ವಿಮಾನ ಪಿಸ್ಟನ್ ಎಂಜಿನ್​ಗಳ ತಯಾರಿಕೆ, ಕಾರ್ಬನ್ ಫೈಬರ್ ಟೆಕ್ನಾಲಜಿಯ ಜಂಟಿ ಅಭಿವೃದ್ಧಿ, ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, 3ಡಿ ಪ್ರಿಂಟಿಂಗ್ ಇತ್ಯಾದಿ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ರೇರ್ ಅರ್ತ್ ಮತ್ತು ಪ್ರಮುಖ ಖನಿಜಗಳನ್ನು ಹೊರತೆಗೆಯುವುದು, ಅಂಡರ್​ಗ್ರೌಂಡ್ ಕೋಲ್ ಕ್ಯಾಸಿಫಿಕೇಶನ್, ಆಧುನಿಕ ಕೈಗಾರಿಕಾ ಇನ್​ಫ್ರಾಸ್ಟ್ರಕ್ಚರ್ ಸ್ಥಾಪಿಸುವುದು ಇತ್ಯಾದಿ ಸಾಧ್ಯತೆಯನ್ನು ಅವಲೋಕಿಸಲಾಗಿದೆ.

ಅಲೂಮಿನಿಯಂ, ರಸಗೊಬ್ಬರ, ರೈಲ್ವೆ ಸಾರಿಗೆಯಲ್ಲಿ ಸಹಕಾರ ಹೆಚ್ಚಿಸುವುದು; ಮೈನಿಂಗ್ ಸೆಕ್ಟರ್ ಉಪಕರಣದಲ್ಲಿ ಕೆಪಾಸಿಟಿ ನಿರ್ಮಾಣ, ಟೆಕ್ನಾಲಜಿ ರವಾನೆ, ಅನ್ವೇಷಣೆ ಹಾಗೂ ಕೈಗಾರಿಕೆ ಮತ್ತು ಗೃಹ ತ್ಯಾಜ್ಯ ನಿರ್ವಹಣೆ ಸಂಬಂಧ ಎರಡೂ ದೇಶಗಳ ನಡುವಿನ ಸಹಕಾರ ಹೆಚ್ಚಿಸುವ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ.

ಮಿಲಿಟರಿ ಸಂಬಂಧ ಮತ್ತಷ್ಟು ಗಟ್ಟಿ

ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಪ್ರಬಲ ಅಂಶವಾಗಿರುವ ಡಿಫೆನ್ಸ್ ಸೆಕ್ಟರ್​ನಲ್ಲೂ ಸಹಕಾರ ಗಟ್ಟಿಗೊಳಿಸಲು ಮಾತುಕತೆಯಾಗಿದೆ. ಭಾರತದಲ್ಲಿರುವ ಹೆಚ್ಚಿನ ಶಸ್ತ್ರಾಸ್ತ್ರಗಳು ರಷ್ಯನ್ ನಿರ್ಮಿತವಾದವಾಗಿವೆ. ಭಾರತದಲ್ಲೇ ತಯಾರಿಸಲಾಗವ ಬ್ರಹ್ಮೋಸ್ ಕ್ಷಿಪಣಿಯು ರಷ್ಯಾ ಮೂಲದ್ದಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8423 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment