ಇಸ್ಕಾನ್ ಮುಖಂಡನನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಸರ್ಕಾರ ಇಸ್ಕಾನ್ ನ 17 ಬ್ಯಾಂಕ್ ಖಾತೆಗಳನ್ನು ಜಫ್ತಿ ಮಾಡಿದೆ.
ಬಾಂಗ್ಲಾದೇಶ ಹೈಕೋರ್ಟ್ ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬೆನ್ನಲ್ಲೇ ಇದೀಗ ಇಸ್ಕಾನ್ ದೇವಸ್ಥಾನ 17 ಬ್ಯಾಂಕ್ ಖಾತೆಗಳನ್ನು ೩೦ ದಿನಗಳ ಕಾಲ ತಟಸ್ಥಗೊಳಿಸಿದೆ.
ಇಸ್ಕಾನ್ ಮಾಜಿ ಸದಸ್ಯ ಚಿನ್ನಯಿ ಕೃಷ್ಣ ದಾಸ್ ಅವರನ್ನು ದೇಶದ್ರೋಹ ಆರೋಪದ ಮೇಲೆ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದರು. ಬಂಧನ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಕಾರಣ ಇಸ್ಕಾನ್ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.
ಬಾಂಗ್ಲಾದೇಶದ ಹಣಕಾಸು ಗುಪ್ತಚರ ವಿಭಾಗ ಇಸ್ಕಾನ್ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ತೆರೆಯಲಾಗಿದ್ದ ಎಲ್ಲಾ ಖಾತೆಗಳನ್ನು 30 ದಿನಗಳ ಕಾಲ ತಟಸ್ಥಗೊಳಿಸಲು ಸೂಚಿಸಿದೆ.