ಕೆಲಸದ ವಿಷಯದಲ್ಲಿ ಗೆಳತಿ ಮೇಲಿನ ಹೊಟ್ಟೆಕಿಚ್ಚಿಗೆ ಆಕೆಯನ್ನು ಕೊಂದ ಪ್ರೇಮಿ ಶವದ ಜೊತೆ ಎರಡು ದಿನ ಮಲಗಿದ್ದ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭೂಪಾಲ್ ಸಮೀಪದ ಗಾಯತ್ರಿ ನಗರದಲ್ಲಿ 32 ವರ್ಷದ ಸಚಿನ್ ರಜಪೂತ್ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ರಿಕಿತಾ ಸೇನ್ ಎಂಬಾಕೆಯ ಕೊಲೆ ಮಾಡಿದ್ದಾನೆ.
ಜೂನ್ 27ರಂದು ಸಚಿನ್ ಮತ್ತು ರಿಕಿತಾ ನಡುವೆ ಕೆಲಸದ ವಿಷಯದಲ್ಲಿ ಮಾತಿಗೆ ಮಾತು ಬೆಳೆದಿದೆ. ರಿಕಿತಾ ಕೆಲಸ ಮಾಡುವ ಜಾಗದಲ್ಲಿ ಬಾಸ್ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಆರೋಪ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನಲ್ಲಿ ರಿಕಿತಾಳ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದರೂ ಏನೂ ಆಗದಂತೆ ಇದ್ದ ಸಚಿನ್, ಪ್ರಿಯತಮೆಯ ಶವವನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಅದರ ಪಕ್ಕದಲ್ಲೇ ಎರಡು ದಿನಗಳ ಕಾಲ ಮಲಗಿದ್ದ. ವಿಷಯ ಎಲ್ಲಿಗೆ ಹೊರಗೆ ಬರುತ್ತದೆ ಎಂಬ ಭಯದಲ್ಲಿ ಅತಿಯಾಗಿ ಕುಡಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಸಚಿನ್ ಗೆಳೆಯ ಮಿರ್ಸೊದ್ ನಲ್ಲಿರುವ ತನ್ನ ಗೆಳೆಯ ಅನುಜ್ ಬಳಿ ಹೇಳಿಕೊಂಡ. ಆದರೆ ಇದನ್ನು ನಂಬದ ಅನುಜ್ ಬೆಳಿಗ್ಗೆ ಮತ್ತೆ ಕೇಳಿದಾಗ ಕೊಲೆ ಮಾಡಿರುವ ವಿಷಯವನ್ನು ಪದೇಪದೇ ಹೇಳಿದ. ಕೂಡಲೇ ಆತ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ.
ಬಜಾರಿಯಾ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಬೆಡ್ ಶೀಟ್ ನಲ್ಲಿ ಸುತ್ತಿದಂತೆ ಶವ ಇತ್ತು. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸಚಿನ್ ಮತ್ತು ರಿಕಿತಾ ಮೂರೂವರೆ ವರ್ಷಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು, ವಿದಿಶಾದ ಸಿರೊಂಜ್ ನಗರದ ಸಚಿನ್ ಮತ್ತು ರಿಕಿತಾ ಜೊತೆ 9 ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ರಿಕಿತಾ ಕೆಲಸಕ್ಕೆ ಹೋಗಿದ್ದರೆ, ನಿರುದ್ಯೋಗಿಯಾಗಿದ್ದ ಸಚಿನ್ ಅಸಮಾಧಾನಗೊಂಡಿದ್ದ ಅಲ್ಲದೇ ಆಕೆಯ ಮೇಲೆ ಅನುಮಾನ ಹೊಂದಿದ್ದ.


