ನೀಲಿ ಚಿತ್ರ ಅಥವಾ ಹಸ್ತಮೈಥುನ ದೃಶ್ಯಗಳನ್ನು ನೋಡುತ್ತಾಳೆ ಎಂಬ ಕಾರಣಕ್ಕೆ ಪತ್ನಿಗೆ ಡಿವೋರ್ಸ್ ನೀಡಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಹಿಳೆಗೂ ಹಸ್ತಮೈಥುನ ಮಾಡಿಕೊಳ್ಳುವ ಹಕ್ಕು ಇದೆ. ವಿವಾಹ ಆಗಿದೆ ಎಂಬ ಕಾರಣಕ್ಕೆ ಇದನ್ನು ತಡೆಯುವ ಮೂಲಕ ಆಕೆಯ ಲೈಂಗಿಕ ಹಕ್ಕುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ನೀಲಿ ಚಿತ್ರಗಳನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳುವ ಕೆಟ್ಟ ಅಭ್ಯಾಸ ಪತ್ನಿಗೆ ಇದೆ ಎಂದು ಪತಿ ಸಲ್ಲಿಸಿದ್ದ ವಿಚ್ಚೇದನ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೊರ್ಟ್ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿ ಅರ್ಜಿಯನ್ನು ತಿರಸ್ಕರಿಸಿತು.
ಸ್ವಯಂ ಸಂತೋಷದಿಂದ ಇತರರಿಗೆ ತೊಂದರೆ ಇಲ್ಲ. ಒಂದು ವೇಳೆ ತೊಂದರೆ ಆಗುತ್ತಿದ್ದರೆ ಅರ್ಜಿಯನ್ನು ಪರಿಶೀಲಿಸಬಹುದಿತ್ತು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಪುರುಷರು ಹಸ್ತಮೈಥುನ ಮಾಡಿಕೊಳ್ಳುವ ವಿಷಯ ಇಡೀ ಜಗತ್ತಿಗೆ ಗೊತ್ತಿದೆ. ಆದರೆ ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದನ್ನು ಅಪರಾಧ ಎಂದು ಭಾವಿಸುವುದು ತಪ್ಪು. ಪ್ರತಿಯೊಬ್ಬರಿಗೂ ವೈಯಕ್ತಿಕ ಇಚ್ಛೆ, ಅಭ್ಯಾಸಗಳು ಇರುತ್ತವೆ ಎಂದು ನ್ಯಾಯಾಧೀಶರು ಹೇಳಿದರು.
ನೀಲಿ ಚಿತ್ರ ನೋಡುವುದು ಹಾಗೂ ಹಸ್ತಮೈಥುನ ನೈತಿಕವಾಗಿ ಸರಿಯಲ್ಲ. ಆದರೆ ಡಿವೋರ್ಸ್ ನೀಡಬಹುದಾದಂತಹ ಕಾನೂನಾತ್ಮಕ ವಿಷಯ ಅಲ್ಲ ಎಂದು ಅವರು ಹೇಳಿದರು.