ಲೈಂಗಿಕವಾಗಿ ತೃಪ್ತಿಪಡಿಸುತ್ತಿಲ್ಲ ಎಂಬ ಅಸಮಾಧಾನದಿಂದ ಗಂಡನನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ ಕತೆ ಕಟ್ಟಿ ಸಿಕ್ಕಿಬಿದ್ದ ಆಘಾತಕಾರಿ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಜುಲೈ ೨೦ರಂದು ಇರಿತಕ್ಕೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಗಂಡನನ್ನು ಪತ್ನಿ ಕರೆದುಕೊಂಡು ಬಂದಿದ್ದಾಳೆ ಎಂದು ನಿಹಾರ್ ವಿಹಾರ್ ಪೊಲೀಸ್ ಠಾಣೆಗೆ ಆಸ್ಪತ್ರೆಯಿಂದ ದೂರವಾಣಿ ಕರೆಬಂದಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಮೊಹಮದ್ ಶಹಿದ್ ಎಂಬಾತ ಪೊಲೀಸರು ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಅಸುನೀಗಿದ್ದ. ಪೊಲೀಸರು ವಿಚಾರಣೆ ನಡೆಸಿದಾಗ ಪತಿ ತನಗೆ ತಾನೇ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು ಎಂದು ಹೇಳಿಕೆ ನೀಡಿದ್ದಳು.
ಮರಣೋತ್ತರ ಪರೀಕ್ಷೆ ವೇಳೆ ಚಾಕುವಿನಿಂದ ಸ್ವಯಂ ಇರಿತ ಮಾಡಿಕೊಂಡು ಸತ್ತಿರುವುದಲ್ಲ. ಯಾರೋ ಮುಂದಿನಿಂದ ಹಲವು ಬಾರಿ ಜೋರಾಗಿ ಇರಿದಿದ್ದರಿಂದ ಮೃತಪಟ್ಟಿದ್ದಾರೆ ಎಂದು ಹೇಳಿತು. ಮರಣೋತ್ತರ ಪರೀಕ್ಷೆ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಪೊಲೀಸರು ಪತ್ನಿಯ ಮೊಬೈಲ್ ಫೋನ್ ಹಿಸ್ಟರಿ ಪರಿಶೀಲಿಸಿದಾಗ ಚಾಟ್ ಹಿಸ್ಟರಿ ಕ್ಲಿಯರ್ ಮಾಡುವುದು ಹೇಗೆ? ಸಾಲ್ಫಾಕ್ಸೆಡ್ ಸೇರಿದಂತೆ ವಿಷದ ಮಾದರಿಗಳನ್ನು ಸರ್ಚ್ ಮಾಡಿರುವುದು ಬೆಳಕಿಗೆ ಬಂದಿದೆ. ಈ ಆಧಾರಗಳನ್ನು ಪಡೆದು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಂಡ ಲೈಂಗಿಕವಾಗಿ ತೃಪ್ತಿ ನೀಡುತ್ತಿರಲಿಲ್ಲ. ಆದ್ದರಿಂದ ಆತನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಗಂಡ ಶಹೀದ್ ಎದೆಗೆ ಮೂರು ಬಾರಿ ಬಲವಾಗಿ ಚಾಕುವಿನಿಂದ ಇರಿದಿದ್ದು, ಆತನ ಸಾಯುವುದು ಖಚಿತ ಎಂದು ದೃಢಪಡಿಸಿಕೊಳ್ಳುತ್ತಿದ್ದಂತೆ ಆತ್ಮಹತ್ಯೆ ನಾಟಕವಾಡಲು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದಾಳೆ.
ಪೊಲೀಸರು ಇದೀಗ ಆಕೆಯನ್ನು ವಶಕ್ಕೆ ಪಡೆದಿದ್ದು, ಆಕೆಯ ಚಾಟ್ ಹಿಸ್ಟರಿ ಪರಿಶೀಲನೆ ನಡೆಸುತ್ತಿದ್ದು, ಯಾರೊಂದಿಗೆ ಆಕೆ ಸಂಪರ್ಕದಲ್ಲಿ ಇದ್ದಳು ಎಂಬ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ಕೊಲೆಗೆ ಬಳಸಿದ ಚಾಕು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.


