Friday, July 10, 2026
Google search engine
Homeದೇಶಜಿಎಸ್‌ ಟಿಯಲ್ಲಿ ಅಮೂಲಾಗ್ರ ಬದಲಾವಣೆ: ದೀಪಾವಳಿಗೆ ಉಡುಗೊರೆ ಘೋಷಿಸಿದ ಪ್ರಧಾನಿ ಮೋದಿ!

ಜಿಎಸ್‌ ಟಿಯಲ್ಲಿ ಅಮೂಲಾಗ್ರ ಬದಲಾವಣೆ: ದೀಪಾವಳಿಗೆ ಉಡುಗೊರೆ ಘೋಷಿಸಿದ ಪ್ರಧಾನಿ ಮೋದಿ!

ಸರಕು ಮತ್ತು ಸಾಗಾಣೆ ಮೇಲಿನ ತೆರಿಗೆ ಜಿಎಸ್‌ ಟಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಮೂಲಕ ದೇಶದ ಜನತೆಗೆ ಈ ಬಾರಿ ದೀಪಾವಳಿಗೆ ಡಬಲ್‌ ಧಮಾಕ ಉಡುಗೊರೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ಕೆಂಪುಕೋಟೆಯಲ್ಲಿ ದಾಖಲೆಯ ಬಾರಿಗೆ ೭೯ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಬಾರಿ ದೀಪಾವಳಿಗೆ ನಾನು ಡಬಲ್‌ ದೀಪಾವಳಿ ಸಂಭ್ರಮ ತರಲಿದ್ದೇನೆ. ಈ ಬಾರಿ ದೀಪಾವಳಿಗೆ ದೇಶದ ಜನತೆ ದೊಡ್ಡ ಉಡುಗೊರೆ ಪಡೆಯಲಿದ್ದಾರೆ. ಮುಂದಿನ ತಲೆಮಾರಿನ ಜಿಎಸ್‌ ಟಿ ಜಾರಿಗೆ ಬರಲಿದ್ದು, ಇದರಿಂದ ದೇಶದ ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲಿದೆ ಎಂದರು.

ದೇಶದ ತೆರಿಗೆ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ೮ ವರ್ಷಗಳ ಹಿಂದೆ ಆರಂಭಿಸಲಾಗಿದ್ದು, ಜಿಎಸ್‌ ಟಿ ಪದ್ಧತಿ ಜಾರಿಗೆ ತರಲಾಯಿತು. ಇದೀಗ ದೇಶದ ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲು ಜಿಎಸ್‌ ಟಿ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments