Sunday, May 17, 2026
Google search engine
Homeದೇಶಆಗಸ್ಟ್ 31ರಿಂದ ಪ್ರಧಾನಿ ಮೋದಿ ಚೀನಾಗೆ ಪ್ರವಾಸ: 6 ವರ್ಷದ ನಂತರ ಚೀನಾ ಪ್ರಧಾನಿ ಭೇಟಿ!

ಆಗಸ್ಟ್ 31ರಿಂದ ಪ್ರಧಾನಿ ಮೋದಿ ಚೀನಾಗೆ ಪ್ರವಾಸ: 6 ವರ್ಷದ ನಂತರ ಚೀನಾ ಪ್ರಧಾನಿ ಭೇಟಿ!

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 31ರಿಂದ ಎರಡು ದಿನಗಳ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಸ್ಥಳೀಯ ವಲಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಗುಲ್ವಾಮ್ ಘರ್ಷಣೆ ನಂತರ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಚೀನಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. 2020ರಲ್ಲಿ ಕೊನೆಯ ಬಾರಿಗೆ ಭೇಟಿ ನೀಡಿದ್ದ ಮೋದಿ ಇದೀಗ ಚೀನಾ ಪ್ರವಾಸ ಕೈಗೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಅಮೆರಿಕ ಚೀನಾ, ಭಾರತದ ಮೇಲೆ ಭಾರೀ ಪ್ರಮಾಣದಲ್ಲಿ ಸುಂಕ ಹೇರಿಕೆ ಮಾಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ರಷ್ಯಾದ ಜೊತೆಗಿನ ವ್ಯಾಪಾರ ನಿಲ್ಲಿಸದೇ ಇದ್ದರೆ ಮತ್ತಷ್ಟು ಸುಂಕ ಹೇರುವ ಎಚ್ಚರಿಕೆ ನೀಡಿದೆ.  ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಧಾನಿ ಚೀನಾ ಭೇಟಿ ಮಹತ್ವದ ಪಡೆದಿದೆ.

ಅಮೆರಿಕದ ಸುಂಕ ಸಮರದ ಜೊತೆ ಪಾಕಿಸ್ತಾನ ವಿರುದ್ಧದ ದಾಳಿಗೆ ಚೀನಾ ಬೆಂಬಲ ನೀಡಿದ್ದು ಸೇರಿದಂತೆ ಹಲವು ಸುತ್ತಿನ ಮಾತುಕತೆ ನಡೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments