Monday, June 8, 2026
Google search engine
Homeಕ್ರೀಡೆಸಿಎಸ್ ಕೆ ಪಾಲಿಗೆ ಡೆವಿಲ್ ಆದ ಡೇವಿಡ್: 251 ರನ್ ಗುರಿ ಒಡ್ಡಿದ ಆರ್ ಸಿಬಿ

ಸಿಎಸ್ ಕೆ ಪಾಲಿಗೆ ಡೆವಿಲ್ ಆದ ಡೇವಿಡ್: 251 ರನ್ ಗುರಿ ಒಡ್ಡಿದ ಆರ್ ಸಿಬಿ

ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್, ರಜತ್ ಪಟಿದಾರ್ ಮತ್ತು ದೇವದತ್ ಪಡಿಕ್ಕಲ್ ಅವರ ಸಿಡಿಲಬ್ಬರದ ಆಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್ ಗುರಿ ಒಡ್ಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್ ಪೇರಿಸಿತು.

ಆರ್ ಸಿಬಿ ತಂಡ ಆರಂಭದಲ್ಲೇ ವಿರಾಟ್ ಕೊಹ್ಲಿ (28) ಕಳೆದುಕೊಂಡು ಚಿಂತೆಗೀಡಾಗಿತ್ತು.  ಫಿಲ್ ಸಾಲ್ಟ್ ಮತ್ತು ದೇವದತ್ ಪಡಿಕ್ಕಲ್ ಎರಡನೇ ವಿಕೆಟ್ ಗೆ 56 ರನ್ ಜೊತೆಯಾಟದಿಂದ ಚೇತರಿಕೆ ನೀಡಿದರು.

ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಫಿಲ್ ಸಾಲ್ಟ್ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಬೌಂಡರಿ ಒಳಗೊಂಡ 46 ರನ್ ಗಳಿಸಿದ್ದಾಗ ಔಟಾಗಿ 4 ರನ್ ನಿಂದ ಅರ್ಧಶತಕ ವಂಚಿತರಾದರು. 17 ಎಸೆತಗಳಲ್ಲಿ 18 ರನ್ ಗಳಿಸಿದ್ದ ಪಡಿಕ್ಕಲ್ ದಿಢೀರನೆ ಸ್ಫೋಟಕ ಆಟಕ್ಕೆ ಇಳಿದು 29 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 50 ರನ್ ಪೂರೈಸಿ ಹೊರನಡೆದರು.

ಈ ಹಂತದಲ್ಲಿ ಆರ್ ಸಿಬಿ 14 ಓವರ್ ಗಳಲ್ಲಿ 151 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಪಡಿಕ್ಕಲ್ ಜಾಗಕ್ಕೆ ಬಂದ ಟಿಮ್ ಡೇವಿಡ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡೇವಿಡ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 8 ಸಿಕ್ಸರ್ ಗಳ ಸಹಾಯದಿಂದ ಅಜೇಯ 70 ರನ್ ಸಿಡಿಸಿದ್ದೂ ಅಲ್ಲದೇ ತಂಡದ ಮೊತ್ತ 250ರ ಗಡಿ ತಲುಪಿಸಿದರು.

ನಾಯಕ ರಜತ್ ಪಟಿದಾರ್ 19 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 48 ರನ್ ಬಾರಿಸಿ ಅಜೇಯರಾಗಿ ಉಳಿದರು. ಚೆನ್ನೈ ಬೌಲಿಂಗ್ ದುರ್ಬಲವಾಗಿದ್ದು, ಕೊನೆಯ ಹಂತದಲ್ಲಿ ಆರ್ ಸಿಬಿ ಅಬ್ಬರಕ್ಕೆ ಕಡಿವಾಣ ಹಾಕಲು ವಿಫಲರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments