Saturday, August 15, 2026
Google search engine
Homeದೇಶಉಗ್ರರು ಬಳಸಿದ್ದು ಒಂದಲ್ಲ 4 ಕಾರು: ಉಳಿದ 2 ಕಾರುಗಳಿಗೆ ಶೋಧ

ಉಗ್ರರು ಬಳಸಿದ್ದು ಒಂದಲ್ಲ 4 ಕಾರು: ಉಳಿದ 2 ಕಾರುಗಳಿಗೆ ಶೋಧ

ದೆಹಲಿಯ ಕೆಂಪುಕೋಟೆಯಲ್ಲಿ ಉಗ್ರರು ನಾಲ್ಕು ಕಾರುಗಳ ಮೂಲಕ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದು, ಒಂದು ಮಾತ್ರ ಸ್ಫೋಟಗೊಂಡಿದೆ ಎಂಬ ಆಘಾತಕಾರಿ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕೆಂಪುಕೋಟೆಯಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ತನಿಖೆ ನಡೆಸುತ್ತಿರುವ ಎನ್ ಐಎ ಹಾಗೂ ಪೊಲೀಸರು ಕಾರು ಸ್ಫೋಟಗೊಂಡ ಪ್ರಕರಣದಲ್ಲಿ ಎರಡು ಕಾರುಗಳು ಎಂದು ಶಂಕಿಸಿದ್ದರು.

ತನಿಖೆ ವೇಳೆ ಇದೀಗ ಉಗ್ರರು ಸ್ಫೋಟಕ್ಕೆ ಬಳಸಿದ್ದು ನಾಲ್ಕು ಕಾರುಗಳು ಎಂದು ತಿಳಿದು ಬಂದಿದ್ದು, ಹೈಂಡುವಿ ಐ20 ಕಾರು ಸ್ಫೋಟಗೊಂಡಿತ್ತು. ಕೆಂಪು ಎಸಿಸ್ಫೋಟ್ಸ್ ಎಸ್ ಯುವಿ ಕಾರು ಬೆನ್ನಟ್ಟಿದ್ದ ತನಿಖಾ ಸಂಸ್ಥೆ ಇದೀಗ ಬಿಳಿ ಮತ್ತೊಂದು ಕಾರಿನ ಸುಳಿವು ಪಡೆದಿದ್ದು, ಅವುಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಉಳಿದ ಮೂರು ಕಾರುಗಳ ಪೈಕಿ ಫೋರ್ಡ್ ಎಕೊ ಸ್ಫೋರ್ಟ್ಸ್ ಹರಿಯಾಣದ ಖಾಂಡೇವಾಲಿ ಫಾರ್ಮ್ಸ್ ಹೌಸ್ ನಲ್ಲಿ ಪತ್ತೆಯಾಗಿತ್ತು. ಉಳಿದೆರಡು ಮಾರುತಿ ಸುಜುಕಿ ಬ್ರೆಜಾ ಮತ್ತು ಮಾರುತಿ ಶಿಫ್ಟ್ ಡಿಜೈರ್ ಗಳಲ್ಲಿ ಕೂಡ ಸ್ಫೋಟಕ ಸಾಗಿಸಲಾಗಿತ್ತು ಎಂದು ತಿಳಿದು ಬಂದಿದೆ.

ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ದಿನದಂದು ದೇಶದ ಹಲವೆಡೆ 6 ಕಡೆ ಬಾಂಬ್ ಸರಣಿ ಬಾಂಬ್ ಸ್ಫೋಟಗೊಳಿಸಲು ಸಂಚು ರೂಪಿಸಲಾಗಿತ್ತು. ಇದರಲ್ಲಿ ಕೆಂಪುಕೋಟೆ ಅಲ್ಲದೇ ಅಯೋಧ್ಯೆ ಸೇರಿದಂತೆ 6 ಕಡೆ ಸ್ಥಳ ಗುರುತಿಸಲಾಗಿತ್ತು ಎಂದು ತಿಳಿದು ಬಂದಿದೆ.

ಉಗ್ರರು ಸ್ಫೋಟಕ್ಕೆ ಹಳೆಯ ಕಾರುಗಳನ್ನೇ ಆಯ್ಕೆ ಮಾಡಿಕೊಂಡಿದ್ದು, ಹಲವು ಬಾರಿ ಮಾರಾಟಗೊಂಡಿರುವ ಕಾರಣ ಈ ಕಾರುಗಳ ಗುರುತು ಪತ್ತೆ ಕಠಿಣ ಹಾಗೂ ಸುಲಭವಾಗಿ ತಮ್ಮ ಕಾರ್ಯ ಸಾಧಿಸಬಹುದು ಎಂದು ಕಾರಣಕ್ಕೆ ಈ ತಂತ್ರಗಳನ್ನು ಬಳಸಿದ್ದರು ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments