Thursday, May 14, 2026
Google search engine
Homeದೇಶಟ್ರಕ್ ಗೆ ಪಿಕಪ್ ವಾಹನ ಡಿಕ್ಕಿ: ದೇವಸ್ಥಾನದಿಂದ ಮರಳುತ್ತಿದ್ದ 9 ಮಕ್ಕಳು ಸೇರಿ 11 ಮಂದಿ...

ಟ್ರಕ್ ಗೆ ಪಿಕಪ್ ವಾಹನ ಡಿಕ್ಕಿ: ದೇವಸ್ಥಾನದಿಂದ ಮರಳುತ್ತಿದ್ದ 9 ಮಕ್ಕಳು ಸೇರಿ 11 ಮಂದಿ ಸಾವು

ನಿಂತಿದ್ದ ಟ್ರಕ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದಲ್ಲಿ ಸಂಭವಿಸಿದೆ.

ಖಾತು ಶ್ಯಾಮ್‌ನಿಂದ ಹಿಂತಿರುಗುತ್ತಿದ್ದಾಗ ಬುಧವಾರ ಮುಂಜಾನೆ ದೌಸಾ – ಮನೋಹರ್‌ಪುರ ರಸ್ತೆಯ ಬಾಪಿ ಬಳಿ ಪಾರ್ಕಿಂಗ್​ ಮಾಡಿದ್ದ ಟ್ರಕ್​ಗೆ ಪಿಕಪ್​ ವ್ಯಾನ್​ ಡಿಕ್ಕಿ ಹೊಡೆದಿದೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಏಳು ಮಕ್ಕಳು ಸೇರಿದ್ದಾರೆ.

ಪಿಕಪ್​ ವ್ಯಾನ್​ನಲ್ಲಿದ್ದ ಪ್ರಯಾಣಿಕರು ಖಾತು ಶ್ಯಾಮ್​ ಮತ್ತು ಸಲಾಸಾರ್​ ಬಾಲಾಜಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಬಳಿಕ ಉತ್ತರ ಪ್ರದೇಶದಲ್ಲಿರುವ ಈಟಾ ನಗರಕ್ಕೆ ಹಿಂತಿರುಗುತ್ತಿದ್ದರು.

ಈ ವೇಳೆ ಮನೋಹರ್​​ಪುರ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ 4 ರಿಂದ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎಂದು ದೌಸಾ ಪೊಲೀಸ್​ ವರಿಷ್ಠಾಧಿಕಾರಿ ಸಾಗರ್​ ಮಾಹಿತಿ ನೀಡಿದ್ದಾರೆ.

ಪಿಕಪ್​ ವ್ಯಾನ್​ನಲ್ಲಿ 25 ಜನರಿದ್ದರು. ಹೆದ್ದಾರಿಯ ಸರ್ವಿಸ್​ ರಸ್ತೆಯಲ್ಲಿ ನಿಂತಿದ್ದ ಸ್ಟೇಷನರಿ ಟ್ರಕ್​ಗೆ ವ್ಯಾನ್​ ಡಿಕ್ಕಿ ಹೊಡೆದಿದೆ. ಗಾಯಗೊಂಡಿರುವ 8 ಜನರ ಪೈಕಿ ಓರ್ವರ ಸ್ಥಿತಿ ಗಂಭೀರವಾಗಿದೆ ಎಂದು ಎಸ್​ ಪಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments