Saturday, May 30, 2026
Google search engine
Homeದೇಶಭಾರತಕ್ಕೆ ಶೇ.5ರಷ್ಟು ರಿಯಾಯಿತಿ ದರದಲ್ಲಿ ತೈಲ: ಅಮೆರಿಕಕ್ಕೆ ರಷ್ಯಾ ತಿರುಗೇಟು

ಭಾರತಕ್ಕೆ ಶೇ.5ರಷ್ಟು ರಿಯಾಯಿತಿ ದರದಲ್ಲಿ ತೈಲ: ಅಮೆರಿಕಕ್ಕೆ ರಷ್ಯಾ ತಿರುಗೇಟು

ಅಮೆರಿಕದ ತೆರಿಗೆ ಹೇರಿಕೆಗೆ ಪ್ರತಿಯಾಗಿ ಶೇ.5ರಷ್ಟು ರಿಯಾಯಿತಿ ದರದಲ್ಲಿ ತೈಲ ಖರೀದಿಗೆ ರಷ್ಯಾ ಭಾರತಕ್ಕೆ ಆಹ್ವಾನ ನೀಡುವ ಮೂಲಕ ತಿರುಗೇಟು ನೀಡಿದೆ.

ಇತ್ತೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಯಾವುದೇ ಒಪ್ಪಂದಕ್ಕೆ ಸಹಿ ಹಾಕದೇ ಸ್ವದೇಶಕ್ಕೆ ಮರಳಿದ್ದೂ ಅಲ್ಲದೇ ರಷ್ಯಾಗೆ ಭೇಟಿ ನೀಡಿದಾಗ ಒಪ್ಪಂದದ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು.

ಇದೀಗ ಶೇ.5ರಷ್ಟು ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಮಾರಾಟ ಮಾಡುವ ಪ್ರಸ್ತಾಪವನ್ನು ರಷ್ಯಾ ಮಾಡುವ ಮೂಲಕ ಅಮೆರಿಕದ ಸುಂಕ ಸಮರಕ್ಕೆ ಬಹಿರಂಗವಾಗಿಯೇ ತಿರುಗೇಟು ನೀಡಿದೆ.

ಭಾರತಕ್ಕೆ ಶೇ.5ರಷ್ಟು ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಹಿಂದೆ ಉದ್ಯಮ ರಹಸ್ಯ ಅಡಗಿದೆ. ಉದ್ಯಮ ಅಂದ ಮೇಲೆ ಶೇ.5 ಏರಿಕೆ ಮತ್ತು ಇಳಿಕೆ ಇದ್ದೇ ಇರುತ್ತದೆ. ಆದರೆ ಎರಡೂ ದೇಶಗಳ ನಡುವಣ ರಾಜಕೀಯ ಸ್ಥಿತಿ ಏನೇ ಇದ್ದರೂ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ಹೇಳಿಕೆ ನೀಡಿದ್ದಾರೆ.

ರಷ್ಯಾ ತೈಲದಿಂದ ಆರ್‌ಐಎಲ್, ನಯಾರಾಗೆ ದುಪ್ಪಟ್ಟು ಲಾಭ: ಅಮೆರಿಕ ಆರೋಪ

ಉಕ್ರೇನ್ ಯುದ್ಧ ಆರಂಭದ ಪ್ರಾರಂಭಿಕ ದಿನಗಳಲ್ಲಿ ಭಾರತವು ರಷ್ಯಾದ ಅಗ್ಗದ ಕಚ್ಚಾ ತೈಲವನ್ನು ಖರೀದಿಸಲಿ ಎಂದು ಅಮೆರಿಕ ಮೌನವಾಗಿ ಪ್ರೋತ್ಸಾಹಿಸುತ್ತಿತ್ತು. ಆದರೆ ಈಗ ಅದು ತೀವ್ರ ಟೀಕೆಯಾಗಿ ಮಾರ್ಪಟ್ಟಿದ್ದು, ಅಮೆರಿಕ ನೇರವಾಗಿ ಭಾರತೀಯ ಶುದ್ಧೀಕರಣಾ ಘಟಕಗಳು “ಅತಿಯಾದ ಲಾಭ” ಗಳಿಸುತ್ತಿವೆ ಎಂದು ಆರೋಪಿಸಿದೆ.

ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳುವಂತೆ ಭಾರತವು ರಷ್ಯಾದ ತೈಲವನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ, ಅದನ್ನು ಶುದ್ಧೀಕರಿಸಿ, ನಂತರ ಯುರೋಪ್ ಹಾಗೂ ಮಸ್ಕೋ ವಿರುದ್ಧ ನಿರ್ಬಂಧ ಹೇರಿದ ಇತರ ಪ್ರದೇಶಗಳಿಗೆ ಮರು ಮಾರಾಟ ಮಾಡುತ್ತಿದೆ.

“ಅವರು ಕೇವಲ ಲಾಭದಾಟ ಆಡುತ್ತಿದ್ದಾರೆ, ಮರುಮಾರಾಟ ಮಾಡುತ್ತಿದ್ದಾರೆ. ಭಾರತದ ಶ್ರೀಮಂತ ಕುಟುಂಬಗಳು 16 ಬಿಲಿಯನ್ ಡಾಲರ್ ಹೆಚ್ಚುವರಿ ಲಾಭ ಪಡೆದಿವೆ” ಎಂದು ಬೆಸೆಂಟ್ ಹೇಳಿದರು.

ಟೀಕೆಯ ಗುರಿ ಭಾರತೀಯ ರಿಫೈನರಿಗಳು

ಈ ಟೀಕೆ ಮುಖ್ಯವಾಗಿ ರಿಲಯನ್ಸ್ ಇಂಡಸ್ಟ್ರೀಸ್‌ ಮತ್ತು ನಯಾರಾ ಎನರ್ಜಿ ಎಂಬ ಖಾಸಗಿ ಶುದ್ಧೀಕರಣಾ ಘಟಕಗಳತ್ತ ಕೇಂದ್ರೀಕೃತವಾಗಿದೆ. ಇವು ಒಟ್ಟಿಗೆ ಯುರೋಪಿಗೆ ಹೊರಡುವ ಶುದ್ಧೀಕೃತ ಇಂಧನದ ದೊಡ್ಡ ಪಾಲನ್ನು ಹೊಂದಿವೆ.

ಪ್ರಕಾರ 2024-25ರ ಆರ್ಥಿಕ ವರ್ಷದಲ್ಲಿ ಈ ಎರಡೂ ಕಂಪನಿಗಳು ಒಟ್ಟಾರೆ 60 ಬಿಲಿಯನ್ ಡಾಲರ್ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿವೆ. ಈ ವರ್ಷದ ಮೊದಲಾರ್ಧದಲ್ಲೇ 15 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳು ಯುರೋಪಿಯನ್ ಯೂನಿಯನ್ಗೆ ರವಾನೆಯಾಗಿವೆ.

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ 2024ರ ಡಿಸೆಂಬರಲ್ಲಿ ರಷ್ಯಾದ ರೋಸ್ನೆಫ್ಟ್ ಜೊತೆ 10 ವರ್ಷದ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದ್ದು, ವರ್ಷಕ್ಕೆ 12-13 ಬಿಲಿಯನ್ ಡಾಲರ್ ಮೌಲ್ಯದಂತೆ ಪ್ರತಿ ದಿನ 5 ಲಕ್ಷ ಬ್ಯಾರಲ್‌ಗಳವರೆಗೆ ಆಮದು ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ.

ನಯಾರಾ ಎನರ್ಜಿ, ಇದರಲ್ಲಿ ರೋಸ್ನೆಫ್ಟ್ಗೆ ಬಹುತೇಕ ಹೂಡಿಕೆ ಇದ್ದು, ರಷ್ಯಾದ ಅವಲಂಬನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದೆ. 2022ರಲ್ಲಿ ನಯಾರಾ ತನ್ನ ಕಚ್ಚಾ ತೈಲದ ಕೇವಲ 27% ರಷ್ಯಾದಿಂದ ಖರೀದಿಸುತ್ತಿದ್ದರೆ, 2025ರಲ್ಲಿ ಅದು 72% ಏರಿಕೆಯಾಗಿದೆ ಎಂದು ಕೇಪ್ಲರ್ ಮಾಹಿತಿ ತಿಳಿಸಿದೆ.

ಭಾರತದ ತೈಲ ಆಮದು ಏರಿಕೆ

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ 2022ಫೆಬ್ರವರಿಯಿಂದ ಭಾರತದಲ್ಲಿ ರಷ್ಯಾ ಕಚ್ಚಾ ತೈಲ ಆಮದು ಭಾರೀ ಪ್ರಮಾಣದಲ್ಲಿ ಏರಿದೆ. ಕೇಪ್ಲರ್ ಮಾಹಿತಿಯ ಪ್ರಕಾರ, ಯುದ್ಧಕ್ಕೂ ಮುನ್ನ ಭಾರತ ದಿನಕ್ಕೆ ಕೇವಲ 68,000 ಬ್ಯಾರಲ್ಗಳನ್ನು ಮಾತ್ರ ಖರೀದಿಸುತ್ತಿತ್ತು.

2023ರ ಮೇನಲ್ಲಿ ಇದು ದಿನಕ್ಕೆ 21.5ಲಕ್ಷ ಬ್ಯಾರಲ್ನ ಗರಿಷ್ಠ ಮಟ್ಟ ತಲುಪಿತು. 2025ರ ಜುಲೈ ವೇಳೆಗೆ ಅದು ದಿನಕ್ಕೆ 17.8ಲಕ್ಷ ಬ್ಯಾರಲ್‌ನಲ್ಲಿ ಸ್ಥಿರವಾಗಿದೆ. ಈಗ ರಷ್ಯಾ ಭಾರತಕ್ಕೆ ಬೇಕಾಗುವ ಒಟ್ಟು ತೈಲದ 36%ಪೂರೈಸುತ್ತಿದೆ. ಯುದ್ಧಕ್ಕೂ ಮುನ್ನ ಅದು ಕೇವಲ 0.2% ಮಾತ್ರವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments