Friday, December 12, 2025
Google search engine
Homeಆರೋಗ್ಯ30 ಲೀಟರ್ ಎದೆಹಾಲು ದಾನ ಮಾಡಿದ ಕ್ರೀಡಾಪಟು ಜ್ವಾಲಾ ಗುಟ್ಟಾ!

30 ಲೀಟರ್ ಎದೆಹಾಲು ದಾನ ಮಾಡಿದ ಕ್ರೀಡಾಪಟು ಜ್ವಾಲಾ ಗುಟ್ಟಾ!

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ನವಜಾತ ಶಿಶುಗಳ ರಕ್ಷಣೆಗೆ 30 ಲೀಟರ್ ಎದೆಹಾಲು ದಾನ ಮಾಡಿ ಗಮನ ಸೆಳೆದಿದ್ದಾರೆ.

ಕಾಮನ್‌ವೆಲ್ತ್ ಮತ್ತು ವಿಶ್ವ ಚಾಂಪಿಯನ್‌ ಶಿಪ್‌ಗಳಲ್ಲಿ ಹಲವು ಪದಕಗಳನ್ನು ಗೆದ್ದ ಸಾಧನೆ ಮಾಡಿರುವ ಜ್ವಾಲಾ ಗುಟ್ಟಾ ಈಗಾಗಲೇ ವಿಶಾಲ್ ಅವರನ್ನು ಮದುವೆ ಆಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಗುವಿಗೆ ಎದೆ ಹಾಲು ನೀಡಿದ ನಂತರ ಎದೆಹಾಲು ಸಂಗ್ರಹಿಸಿ ಪ್ರತಿದಿನ ಸರ್ಕಾರಿ ಆಸ್ಪತ್ರೆಗೆ ದಾನ ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ದಿನ 600 ಮಿಲಿ ಮೀಟರ್ ನಂತೆ 4 ತಿಂಗಳ ಕಾಲ ಸುಮಾರು 30 ಲೀಟರ್ ಎದೆಹಾಲು ನೀಡಿದ್ದಾರೆ.

ತಾಯಿಯ ಎದೆಹಾಲು ಕೊರತೆಯಿಂದ ಸಾಯುತ್ತಿರುವ ಹಾಗೂ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಮಕ್ಕಳ ರಕ್ಷಣೆಗೆ ಹಾಗೂ ಚಿಕಿತ್ಸೆಗಾಗಿ ಎದೆಹಾಲು ಸಂಗ್ರಹಿಸಿ ಮಕ್ಕಳಿಗೆ ನೀಡಲಾಗುವ ಯೋಜನೆಗೆ ಕೈ ಜೋಡಿಸಿರುವ ಜ್ವಾಲಾ ಗುಟ್ಟಾ ಅವರ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಮುಕ್ತ ಪ್ರಶಂಸೆ ವ್ಯಕ್ತವಾಗಿದೆ.

ಜ್ವಾಲಾ ಗುಟ್ಟಾ ಇದೀಗ ತಾಯಂದಿರಿಂದ ಹಾಲು ಪಡೆಯಲು ಸಾಧ್ಯವಾಗದ ಅಸಹಾಯಕ ಶಿಶುಗಳಿಗೆ ತಾಯಿಯಾಗಿದ್ದಾರೆ. ಅವರ ಆಪ್ತ ವೈದ್ಯೆ ಮಂಜುಳಾ ಅಂಗಾನಿ ಈ ನಿರ್ಧಾರಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಗುಟ್ಟಾ ಹೇಳಿದ್ದಾರೆ.

ತಾಯಿಯ ಹಾಲನ್ನು ‘ಮಕರಂದ’ ಎಂದು ಪರಿಗಣಿಸಲಾಗುತ್ತದೆ. ಇದು ಮಗುವಿನ ದೇಹವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಜ್ವಾಲಾ ಅವರ ಈ ದಾನವು ಕೇವಲ ಸಹಾಯವಲ್ಲ, ಬದಲಾಗಿ ನೂರಾರು ಮುಗ್ಧ ಜೀವಗಳಿಗೆ ನೀಡಿದ ಹೊಸ ಜೀವನವಾಗಿದೆ.

ಆಟಗಾರ್ತಿಯಾಗಿ ಜ್ವಾಲಾ ಗುಟ್ಟಾ ಅವರ ಸಾಧನೆ ಅಪಾರವಾದುದು. ಈಕೆ 2010 ಮತ್ತು 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದಲ್ಲದೇ ತಮ್ಮ ಜೋಡಿ ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಅನೇಕ ಐತಿಹಾಸಿಕ ಪಂದ್ಯಗಳನ್ನು ಗೆದ್ದ ಖ್ಯಾತಿ ಅವರಿಗೆ ಸಲ್ಲುತ್ತದೆ. ಡಬಲ್ಸ್‌ನಲ್ಲಿ ಭಾರತವನ್ನು ವಿಶ್ವ ಸ್ಥಾನಮಾನಕ್ಕೆ ತರುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಇದರ ಹೊರತಾಗಿ, 2011 ರಲ್ಲಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದು, 2014 ರಲ್ಲಿ ಥಾಮಸ್ ಮತ್ತು ಉಬರ್ ಕಪ್‌ಗಳಲ್ಲಿ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

https://twitter.com/Guttajwala/status/1957124355818971383

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments