Friday, December 12, 2025
Google search engine
Homeಕ್ರೀಡೆBREAKING ಬೆಂಗಳೂರಿನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

BREAKING ಬೆಂಗಳೂರಿನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

ವಿಶ್ವದ ಅಗ್ರಮಾನ್ಯ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ಬೆಂಗಳೂರಿನಲ್ಲಿ ನಡೆದ ಕ್ಲಾಸಿಕ್ 2025 ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜಾವೆಲಿನ್ ಸ್ಪರ್ಧೆಯಲ್ಲಿ ತಮ್ಮ ವೈಯಕ್ತಿಕ ಗರಿಷ್ಠ ಸಾಧನೆಯಾದ 90 ಮೀಟರ್ ದಾಖಲಿಸಲು ವಿಫಲರಾದರೂ ಚಿನ್ನದ ಪದಕ ಗೆದ್ದು ಅಭಿಮಾನಿಗಳು ನಿರಾಸೆ ಆಗದಂತೆ ನೋಡಿಕೊಂಡರು. ಭಾರತದ ಮತ್ತೊಬ್ಬ ಸ್ಪರ್ಧಿ ಸಚಿನ್ ಯಾದವ್ 82.33 ಮೀ.ನೊಂದಿಗೆ ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾದರು.

ದೇಶದಲ್ಲಿ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಜಾವೆಲಿನ್ ಟೂರ್ನಿ ಆಗಿದ್ದು, ನೀರಜ್ ಚೋಪ್ರಾ ಗರಿಷ್ಠ 86.18 ಮೀ. ದೂರ ದಾಖಲಿಸಿ ಚಿನ್ನದ ಪದಕ ಗೆದ್ದರು. 201ರ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕೀನ್ಯಾದ ಜುಲಿಯಸ್ ಯೆಗೊ 84.51 ದೂರ ದಾಖಲಿಸಿ ಬೆಳ್ಳಿ ಪದಕದ ಸಾಧನೆ ಮಾಡಿದರು. ಶ್ರೀಲಂಕಾದ 16 ವರ್ಷದೊಳಗಿನ ಮಾಜಿ ವೇಗದ ಬೌಲರ್ ರುಮೇಶ್ ಪತಿರಾಗೆ 84.34 ಮೀ. ದಾಖಲಿಸಿ ಕಂಚಿನ ಪದಕ ಗೆದ್ದುಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments