Friday, December 12, 2025
Google search engine
Homeಕ್ರೀಡೆಆರ್ ಸಿಬಿ- ಪಂಜಾಬ್ ಐಪಿಎಲ್ ಫೈನಲ್ ಗೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತೆ?

ಆರ್ ಸಿಬಿ- ಪಂಜಾಬ್ ಐಪಿಎಲ್ ಫೈನಲ್ ಗೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮಂಗಳವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಮಳೆಯ ಭೀತಿ ಇರುವುದರಿಂದ ಕಪ್ ಯಾರ ಪಾಲಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳು ತೊಡಗಿದ್ದಾರೆ.

ಐಪಿಎಲ್ ಟಿ-20 ಫೈನಲ್ ಪಂದ್ಯಕ್ಕೆ ಹವಾಮಾನ ಇಲಾಖೆ ಪ್ರಕಾರ ಮಳೆಯ ಭೀತಿ ಇದೆ. ಗುಜರಾತ್ ನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಕ್ವಾಲಿಫೈಯರ್-2 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಂತೆ ಫೈನಲ್ ಗೂ ಅಡ್ಡಿಪಡಿಸಬಹುದು ಎಂದು ಹೇಳಲಾಗಿದೆ. ಐಪಿಎಲ್ ಟಿ-20 ಟೂರ್ನಿಯ ನಿಯಮದ ಪ್ರಕಾರ ರಾತ್ರ 9.45ರವರೆಗೆ ಕಾದು ನೋಡಬಹುದು.

ರಾತ್ರಿ 9.45ರೊಳಗೆ ಪಂದ್ಯ ಆರಂಭವಾದರೆ ಪೂರ್ಣ 20 ಓವರ್ ಗಳ ಪಂದ್ಯ ನಡೆಯಲಿದೆ. ಒಂದು ವೇಳೆ ಪಂದ್ಯ ಪೂರ್ಣ 20 ಓವರ್ ನಡೆಸಲು ಸಾಧ್ಯವಾಗದೇ ಇದ್ದರೆ ಮೀಸಲು ದಿನವಾದ ಜೂನ್ 4ರಂದು ನಡೆಯಲಿದೆ.

ಪಂದ್ಯ ಆರಂಭ ಮತ್ತು ಮುಕ್ತಾಯಕ್ಕೆ ಹೆಚ್ಚುವರಿ 2 ಗಂಟೆ ಮೀಸಲಿಡಲಾಗಿದೆ. 11.56ಕ್ಕೆ ಸಮಯ ನಿಗದಿಪಡಿಸಲಾಗಿದ್ದು, 2 ಗಂಟೆಯವರೆಗೆ ಪಂದ್ಯ ನಡೆಯಸಬಹುದಾಗಿದೆ. ಒಂದು ವೇಳೆ ಪಂದ್ಯ ಆರಂಭಗೊಂಡ ನಂತರ ಮುಕ್ತಾಯವಾಗದೇ ಇದ್ದರೆ ಮೀಸಲು ದಿನವಾದ ಗುರುವಾರ ಪಂದ್ಯ ಮುಂದುವರಿಯಲಿದೆ.

ಒಂದು ವೇಳೆ ಐಪಿಎಲ್ ಫೈನಲ್ ಗೆ ಮೀಸಲಾದ ಎರಡೂ ದಿನವೂ ಮಳೆಯಿಂದ ಪಂದ್ಯ ನಡೆಯಲು ಸಾಧ್ಯವಾಗದೇ ಇದ್ದರೆ ಲೀಗ್ ನಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಪ್ರಶಸ್ತಿ ಲಭಿಸಲಿದೆ. ಅಂದರೆ ಈ ಬಾರಿ ಫೈನಲ್ ಪಂದ್ಯ ನಡೆಯದೇ ಇದ್ದರೆ ಪಂಜಾಬ್ ಕಿಂಗ್ಸ್ ತಂಡ ಪ್ರಶಸ್ತಿ ಎತ್ತಿ ಹಿಡಿಯಲಿದೆ.

2023ರಲ್ಲಿ ಇದೇ ರೀತಿ ಆಗಿದ್ದು, ಮೇ 28ರಂದು ಫೈನಲ್ ಪಂದ್ಯ ನಿಗದಿಯಾಗಿದ್ದು ಅಂದು ಮಳೆಯಿಂದ ಪಂದ್ಯ ನಡೆಯಲಿಲ್ಲ. ಅದೃಷ್ಟವಶಾತ್ ಮೀಸಲು ದಿನ ಮಳೆ ಅಡ್ಡಿಪಡಿಸದ ಕಾರಣ ಪೂರ್ಣ ಪ್ರಮಾಣದಲ್ಲಿ ಪಂದ್ಯ ನಡೆದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments