ಜಮೈಕಾ: ಹೊಡಿಬಡಿ ಆಟ ಹಾಗೂ ಬಿರುಸಿನ ದಾಳಿಗೆ ಹೆಸರುವಾಸಿಯಾದ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ 37 ವರ್ಷದ ಆಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ತವರಿನಲ್ಲಿ ಆಸ್ಟೆçÃಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳು ಸಬಿನಾ ಪಾರ್ಕ್ನಲ್ಲಿ ನಡೆಯಲಿವೆ. ಈ ಪಂದ್ಯ ರಸೆಲ್‌ರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ಪಂದ್ಯವಾಗಿರಲಿದೆ.
ವಿಂಡೀಸ್ ಕ್ರಿಕೆಟ್ ಸಂಸ್ಥೆ ಈ ಸ್ಟಾರ್ ಆಟಗಾರನಿಗೆ ಗೌರವ ಸೂಚಿಸಿದೆ. ಆಂಡ್ರೆ ರಸೆಲ್ ತಮ್ಮ ನಿವೃತ್ತಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ತಿಳಿಸಿದ್ದಾರೆ.
“ವೆಸ್ಟ್ ಇಂಡೀಸ್ ಪರ ಆಡುವುದು ನನಗೆ ದೊಡ್ಡ ವಿಷಯ. ಚಿಕ್ಕವನಿದ್ದಾಗ ಈ ಮಟ್ಟದ ಕ್ರಿಕೆಟ್ ಆಡಲು ಬಯಸಿದ್ದೆ. ಆದರೆ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ಕ್ರಿಕೆಟ್ ಆಟ ನನಗೆ ಸ್ಪೂರ್ತಿ ನೀಡಿದೆ. ವೆಸ್ಟ್ ಇಂಡೀಸ್ ತಂಡದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯುವುದು ದೊಡ್ಡ ಸಾಧನೆ. ಮನೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಲ ಕಳೆಯಲು ನಾನು ಇಷ್ಟಪಡುತ್ತೇನೆ. ನಾನು ಇಷ್ಟ ಪಡುವ ಕ್ರಿಕೆಟ್ ಆಟದ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಲು ಬಯಸುವೆ” ಎಂದು ತಿಳಿಸಿದ್ದಾರೆ.
ಆಂಡ್ರೆ ರಸೆಲ್ 2011ರಿಂದ ವೆಸ್ಟ್ ಇಂಡೀಸ್ ತಂಡದ ಪರ ಕ್ರಿಕೆಟ್ ಆಡುತ್ತಿದ್ದಾರೆ. ಇವರ ಅಮೋಘ ಆಟದ ಬಲದಿಂದ ಕೆರಿಬಿಯನ್ ತಂಡಕ್ಕೆ ಆಧಾರವಾಗಿದ್ದಾರೆ. ರಸೆಲ್ ವೆಸ್ಟ್ ಇಂಡೀಸ್ ಕಂಡ ಸ್ಟಾರ್ ಆಟಗಾರರಲ್ಲಿ ಒಬ್ಬರು. ಇವರು ೫೬ ಏಕದಿನ ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 1034 ರನ್ ಕಲೆಹಾಕಿದ್ದಾರೆ, ಈ ವೇಳೆ 4 ಅರ್ಧಶತ ಸಿಡಿಸಿದ್ದಾರೆ. ಇನ್ನು 84 ಟಿ20 ಪಂದ್ಯಗಳಲ್ಲಿ 1078 ರನ್ ಗಳಿಸಿದ್ದಾರೆ.


