ಲಂಡನ್: ವಿಂಬಲ್ಡನ್ನಲ್ಲಿ ಚೀನಾದ ಒಲಿಂಪಿಕ್ ಚಾಂಪಿಯನ್ ಝೆಂಗ್ ಕ್ವಿನ್ವೆನ್ ಸೇರಿದಂತೆ ಐವರು ಟಾಪ್-10 ಶ್ರೇಯಾಂಕಿತ ಆಟಗಾರರು ಅನಿರೀಕ್ಷಿತ ಸೋಲನ್ನು ಕಂಡಿದ್ದಾರೆ. ತಾಪಮಾನದ ಏರಿಕೆಯಿಂದಾಗಿ ಅನೇಕ ಆಟಗಾರರು ಕಳಪೆ ಪ್ರದರ್ಶನ ತೋರಿದರು.
ಮಹಿಳಾ ಸಿಂಗಲ್ಸ್ನಲ್ಲಿ 5ನೇ ಶ್ರೇಯಾಂಕಿತ ಆಟಗಾರ್ತಿ ಝೆಂಗ್ ಕ್ವಿನ್ವೆನ್, ಜೆಕ್ ಗಣರಾಜ್ಯದ ಡಬಲ್ಸ್ ತಜ್ಞೆ ಕಟೆರಿನಾ ಸಿನಿಯಾಕೋವಾ ವಿರುದ್ಧ 7-5, 4-6, 6-1 ಅಂತರದಿಂದ ಸೋತು, ಗ್ರಾಸ್-ಕೋರ್ಟ್ ಗ್ರ್ಯಾಂಡ್ ಸ್ಲಾಮ್ನಲ್ಲಿ ಸತತ ಮೂರನೇ ಬಾರಿಗೆ ಸೋಲುಂಡರು.
ಪಂದ್ಯವು ಲಂಡನ್ನ ಅತ್ಯಂತ ಬಿಸಿಲಿನ ದಿನದಂದು ನಡೆಯಿತು, ತಾಪಮಾನ 33 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿತ್ತು. `ನಾನು ನನ್ನ ಸವರ್ಿಸ್ ಗೇಮ್ಗಳಲ್ಲಿ ಉತ್ತಮವಾಗಿ ಆಡಬೇಕಿತ್ತು,” ಎಂದು ಝೆಂಗ್ ಹೇಳಿದರು.
ಮೊದಲ ಸೆಟ್ನಲ್ಲಿ 5-3ರಲ್ಲಿ ಮುನ್ನಡೆಯಲ್ಲಿದ್ದ ಅವರು ಎರಡು ಬಾರಿ ಬ್ರೇಕ್ ಆದರು. `ಗ್ರಾಸ್ ಮೇಲ್ಮೈ ನನಗೆ ಸವಾಲಿನದ್ದಲ್ಲ ಎಂದು ಭಾವಿಸುತ್ತೇನೆ. ಆದರೆ, ಇಂದು ನನ್ನ ಸವರ್ಿಸ್ನಲ್ಲಿ ನನ್ನ ಮಟ್ಟವನ್ನು ಉನ್ನತೀಕರಿಸಬೇಕಿತ್ತು,” ಎಂದು ಅವರು ಸೇರಿಸಿದರು.
29 ವರ್ಷದ ಸಿನಿಯಾಕೋವಾ, 10 ಬಾರಿ ಮಹಿಳಾ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, ಎರಡನೇ ಸುತ್ತಿನಲ್ಲಿ ನಾಲ್ಕು ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ನವೊಮಿ ಒಸಾಕಾ ಅವರನ್ನು ಎದುರಿಸಲಿದ್ದಾರೆ.
ಎರಡನೇ ಶ್ರೇಯಾಂಕಿತ ಕೊಕೊ ಗೌಫ್ ಮತ್ತು ಮೂರನೇ ಶ್ರೇಯಾಂಕಿತ ಜೆಸ್ಸಿಕಾ ಪೆಗುಲಾ ಕೂಡ ಈ ದಿನದಂದು ಅನಿರೀಕ್ಷಿತವಾಗಿ ಮಹಿಳಾ ಸಿಂಗಲ್ಸ್ನಿಂದ ಹೊರಬಿದ್ದರು.
ಹಾಲಿ ಯುಎಸ್ ಓಪನ್ ಚಾಂಪಿಯನ್ ಕೊಕೊ ಗೌಫ್, ಕಳೆದ ತಿಂಗಳು ಫ್ರೆಂಚ್ ಓಪನ್ ಗೆದ್ದವರು, ಉಕ್ರೇನ್ನ ದಯಾನಾ ಯಸ್ಟ್ರೆಮ್ಸ್ಕಾ ವಿರುದ್ಧ 7-6 (3), 6-1ರಿಂದ ಸೋತರು.


