ಬೌಲರ್ ಗಳ ಸಂಘಟಿತ ಮಾರಕ ದಾಳಿ ಹಾಗೂ ಆರಂಭಿಕ ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕದ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡ 8 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ.
ಗುವಾಹತಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 19.4 ಓವರ್ ಗಳಲ್ಲಿ 127 ರನ್ ಗೆ ಆಲೌಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 12.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ರಾಜಸ್ಥಾನ್ ಗೆ ಸಂಚಲನ ಸೃಷ್ಡಿಸಿರುವ ವೈಭವ್ ಸೂರ್ಯವಂಶಿ 16 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 52 ರನ್ ಸಿಡಿಸಿ ಮಿಂಚಿನ ಆರಂಭ ನೀಡಿದರು. ಯಶಸ್ವಿ ಜೈಸ್ವಾಲ್ ಅಜೇಯ 38 ರನ್ ಬಾರಿಸಿದರು.
47 ಎಸೆತಗಳಲ್ಲಿ ರಾಜಸ್ಥಾನ್ ರಾಯಲ್ಸ್ ಗೆ ಇದು ಅತೀ ದೊಡ್ಡ ಗೆಲುವು ದಾಖಲಿಸಿತು. ಇದಕ್ಕೂ ಮುನ್ನ ಆರ್ ಸಿಬಿ ವಿರುದ್ಧ 42 ಎಸೆತ ಬಾಕಿ ಇರುವಂತೆಯೇ ಗೆದ್ದಿದ್ದು ದಾಖಲೆಯಾಗಿತ್ತು.



