ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಕಿರುತೆರೆ ನಟ ಶ್ರೀಧರ್ ನಾಯಕ್ ನಿಧನರಾದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಅವರಿಗೆ 47 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ದಿಢೀರನೆ ಅಸ್ವಸ್ಥಗೊಂಡಿದ್ದ ಶ್ರೀಧರ್ ನಾಯಕ್ ಬೆಡ್ ಗುರುತು ಸಿಗಲಾರಷ್ಟು ಬದಲಾಗಿದ್ದರು. ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಅವರಿಗೆ ಹಲವು ಕಲಾವಿದರು ನೆರವಿಗೆ ಬಂದಿದ್ದರು.
ಪಾರು ಮತ್ತು ವಧು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಶ್ರೀಧರ್ ನಾಯಕ್ ಇತ್ತೀಚಿನ ಸೂಪರ್ ಹಿಟ್ ಚಿತ್ರ ಮ್ಯಾಕ್ಸ್ ಚಿತ್ರದಲ್ಲೂ ನಟಿಸಿದ್ದರು. ಶ್ರೀಧರ್ ಅವರನ್ನು ವರ್ಷಗಳ ಹಿಂದೆ ಪತ್ನಿ ತೊರೆದಿದ್ದರು. ಹೀಗಾಗಿ ಅವರು ಒಂಟಿಯಾಗಿ ಜೀವನ ನಡೆಸುತ್ತಿದ್ದರು.



