Thursday, 29 October 2026 — Kannadavahini
BREAKING NEWS
Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್
ತಾಜಾ ಸುದ್ದಿ

ವಾಹನ ಸವಾರರಿಗೆ ಬಿಗ್ ಶಾಕ್: ವಾಹನ ಮಾರಿದ 14 ದಿನದಲ್ಲಿ ದಾಖಲೆ ವರ್ಗಾವಣೆ ಕಡ್ಡಾಯ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 2 ವೀಕ್ಷಣೆಗಳು
traffic police

ಹೊಸದಿಲ್ಲಿ: ವಾಹನವನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ ನಂತರ ಆತನ ಸಾರಿಗೆ ನೋಂದಣಿ ಮಾಡಿಸಲು ತಪ್ಪಿದರೇ ಮೂಲ ಮಾಲೀಕರನ್ನು ಸಂಕಷ್ಟಕ್ಕೆ ದೂಡುವ ನಿಯಮವನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮನಿಸಿದೆ.

ವಾಹನ ಮಾರಾಟವಾಗಿ ಸುಮಾರು ದಿನಗಳೇ ಆದರೂ ಆ ವಾಹನದ ದಾಖಲೆಯು ನಿಮ್ಮ ಹೆಸರಿನಲ್ಲೇ ಇದ್ದರೆ ತಕ್ಷಣವೇ ವಾಹನಗಳನ್ನು ಕೊಂಡವರಿಗೆ 14 ದಿನಗಳೊಳಗೆ ಅವರ ಹೆಸರಿಗೆ ವರ್ಗಾಯಿಸುವಂತೆ ಕೇಳಿಕೊಳ್ಳಬೇಕು.

ಕೇಂದ್ರ ಮೋಟಾರು ವಾಹನಗಳ ಇಲಾಖೆಯು (ಎಂವಿಡಿ) ಈ ಕುರಿತಾದ ನಿಯಮವೊಂದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ. ಅದರಂತೆ, ವಾಹನ ಮಾರಾಟವಾದ 14 ದಿನಗಳಲ್ಲಿ, ಅಂದರೆ, ಎರಡು ವಾರಗಳಲ್ಲಿ ವಾಹನದ ಅಷ್ಟೂ ದಾಖಲೆಗಳು ಕೊಂಡವರ ಹೆಸರಿಗೆ ಕಡ್ಡಾಯವಾಗಿ ವರ್ಗಾವಣೆಯಾಗಬೇಕು.

ಈ ನಿಯಮವನ್ನು ಉಲ್ಲಂಘಿಸಿದರೆ, ಕೊಂಡವರು ಆ ವಾಹನದಿದ ಏನಾದರೂ ಆಕ್ಸಿಡೆಂಟ್ ಮಾಡಿಕೊಂಡರೆ ಅಥವಾ ಯಾವುದಾದರೂ ಕ್ರಿಮಿನಲ್ ಕೃತ್ಯಗಳಿಗೆ ಬಳಸಿದರೆ ಆ ಕಾರಿನ ಮಾಲೀಕತ್ವ ದಾಖಲೆಗಳು ಯಾರ ಹೆಸರಿನಲ್ಲಿ ಇರುವುದೋ ಅವರಿಗೇ ನೋಟೀಸ್ ಜಾರಿ ಮಾಡಲಾಗುತ್ತದೆ.

ಈ ನಿಯಮ ಹೊಸದಲ್ಲವಾದರೂ ಈಗ ಅದಕ್ಕೆ ಸಮಯದ ಅವಧಿ ನಿಗದಿ ಮಾಡಲಾಗಿದೆ. ವಾಹನ ಕೊಂಡವರ ಹೆಸರಿಗೆ ದಾಖಲೆಗಳು ವರ್ಗಾವಣೆಯಾಗದಿದ್ದರೆ ಮೂಲ ಓನರ್‌ಗೆ ಕಿರಿಕಿರಿ ಉಂಟಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಆದರೆ, ಆ ದಾಖಲೆಗಳ ವರ್ಗಾವಣೆ ಎಷ್ಟು ದಿನದೊಳಗೆ ಮುಗಿಸಬೇಕು ಎಂಬುದಕ್ಕೆ ಈಗ ಕೇಂದ್ರ ಮೋಟಾರು ವಾಹನ ಇಲಾಖೆ 14 ದಿನಗಳ ಗಡುವನ್ನು ನೀಡಿದೆ.

ಸ್ಥಳೀಯ ಆರ್ ಟಿಒ ಕಚೇರಿಗೆ ತೆರಳಿದರೆ ಅಲ್ಲಿ ವಾಹನ ದಾಖಲೆಗಳ ವರ್ಗಾವಣೆಗಾಗಿ ಇರುವ ಅರ್ಜಿ ನಮೂನೆ ಸಿಗುತ್ತದೆ. ಆ ಅರ್ಜಿಯನ್ನು ತುಂಬಿ ನಿಗದಿ ಶುಲ್ಕದೊಂದಿಗೆ ಇದನ್ನು ಸಲ್ಲಿಸಬೇಕು.

ಇದು ವಾಹನ ಕೊಂಡವರ ಜವಾಬ್ದಾರಿಯಾಗಿರುತ್ತದೆ. ವಾಹನ ಕೊಂಡ 14 ದಿನಗಳೊಳಗೆ ಈ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಲ್ಲಿ ನೀವು ಕೊಡುವ ಮೊಬೈಲ್ ನಂಬರ್ ಅನ್ನು ಒಟಿಪಿ ನಂಬರ್ ನಿಂದ ಖಾತ್ರಿ ಪಡಿಸಿಕೊಳ್ಳಲಾಗುತ್ತದೆ.

15 ವರ್ಷ ಹಳೆಯದಾದ ವಾಹನವಾಗಿದ್ದರೆ, ಅದರ ಮೂಲ ಮಾಲೀಕರು 200 ರೂ. ಮೌಲ್ಯದ ಸ್ಟಾಂಪ್ ಪೇಪರಿನ ಮೇಲೆ ವಾಹನದ ತಮ್ಮದೆಂದು ಘೋಷಿಸಿಕೊಳ್ಳಬೇಕು. ಅಂದರೆ, ಅಫಿಡವಿಟ್ ಮಾಡಿಸಬೇಕು. ಒಂದು ವೇಳೆ ನಿಮ್ಮ ವಾಹನವನ್ನು ಸರ್ಕಾರದ ಗುಜರಿ ನೀತಿಯಡಿ ಗುಜರಿಗೆ ಹಾಕಿದರೂ ವಾಹನಗಳ ದಾಖಲೆಗಳು ಬದಲಾಗಲೇಬೇಕಿರುತ್ತದೆ.

ಗುಜರಿಗೆ ಹಾಕಿದ ನಂತರ ಎಷ್ಟೋ ಕಡೆ ಆ ಕಾರುಗಳು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿದ ಉದಾಹರಣೆಯಿವೆ. ಅಲ್ಲಿಯೂ ಸಹ ಗುಜರಿಗೆ ಹಾಕಿದ ನಂತರ ಕ್ಲಿಯರೆನ್ಸ್ ್ರಮಾಣಪತ್ರ ಪಡಯುವುು ಅವಶ್ಯಕತೆಯಿರುತ್ತದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8392 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment