Wednesday, July 1, 2026
Google search engine
Homeಬೆಂಗಳೂರುಹುಚ್ಚು ಹುಚ್ಚಾಗಿ ಮಾತನಾಡೋ ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ದೂರು: ರೇಣುಕಾಚಾರ್ಯ

ಹುಚ್ಚು ಹುಚ್ಚಾಗಿ ಮಾತನಾಡೋ ಯತ್ನಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ದೂರು: ರೇಣುಕಾಚಾರ್ಯ

ಬಸವನಗೌಡ ಪಾಟೀಲ್ ಯತ್ನಾಳ ಹಾವು ರಮೇಶ್ ಜಾರಕಿಹೊಳಿ‌ ವಿರುದ್ದ ಶೀಘ್ರದಲ್ಲೇ ಹೈಕಮಾಂಡ್ ಗೆ ದೂರು ನೀಡುವುದಾಗಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರನ್ನು ಈ ಹಿಂದೆ ಪಕ್ಷ ಉಚ್ಚಾಟನೆ‌  ಮಾಡಿತ್ತು. ಆಗ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಬಿಜೆಪಿಗೆ ಮರಳಿದ್ದರು. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿ, ಸೈಕಲ್, ಸ್ಕೂಟರ್, ಬಸ್, ಕಾರಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ ಯಡಿಯೂರಪ್ಪ ಪಕ್ಷ ಕಟ್ತಿದ್ದಾಗ ಯತ್ನಾಳದ ಕಣ್ ಬಿಟ್ಟಿರಲಿಲ್ಲ ಎಚ್ಚರಿಕೆಯಿಂದ ಯತ್ನಾಳ್ ಮಾತನಾಡಬೇಕು. ವಿಜಯೇಂದ್ರ ಅವರನ್ನ ಅಧ್ಯಕ್ಷ ಮಾಡಿದ್ದು ಹೈಕಮಾಂಡ್. ವಿಜಯೇಂದ್ರ ಅವರಿಗೆ ಬೈದ ಹೈಕಮಾಂಡ್ ಗೆ ಬೈದಂತೆ. ನೀವು ಏನೇ ಮಾಡಿದ್ರೂ ವಿಜಯೇಂದ್ರ ವರ್ಚಸ್ಸು ಕುಗ್ಗಲ್ಲ. ನಿಮಗೆ ಯಡಿಯೂರಪ್ಪ ಬಗ್ಗೆ ಮಾತಾಡೋಕ್ಕೆ ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಕೆಲವರು ಮಗು ಚಿವುಟಿ ತೊಟ್ಟಿಲು ತೂಗ್ತಿದ್ದಾರೆ ಇಲ್ಲಿ ಯತ್ನಾಳ್ ನ ಎತ್ತಿ ಕಟ್ತಿದ್ದಾರೆ ಕೆಲವರು ವಿಜಯೇಂದ್ರರ ವರ್ಚಸ್ಸು ಕುಗ್ಗಿಸಬಹುದು ಅಂತ ಅಂದುಕೊಂಡಿದ್ದಾರೆ. ಬಹಳ ಗೌರವ ಕೊಟ್ಟು ಇದುವರೆಗೂ ನಿನ್ನ ಬಗ್ಗೆ ಇದುವರೆಗೆ‌‌ ಮಾತಾಡಿದ್ದೇವೆ, ಇನ್ಮುಂದೆ ಸಹಿಸಲ್ಲ ಮುಂದಿನ ಶನಿವಾರ ನಾವು ಸಭೆ ಸೇರುತ್ತೇವೆ ಹೈಕಮಾಂಡ್ ಬಳಿಗೆ ಹೋಗಿ ದೂರು ಕೊಡುತ್ತೇವೆ ಎಂದು ಹೇಳಿದರು.

ಹರಕು ಬಾಯಿ ಯತ್ನಾಳ್

ಯಡಿಯೂರಪ್ಪ ವಿರುದ್ಧ ಸಂಚು ಮಾಡಿದಾಗಲೆಲ್ಲ ಬಿಜೆಪಿಗೆ ಕಮ್ಮಿ ಸ್ಥಾನ ಬಂದಿದ  ಅನಗತ್ಯ ಟೀಕೆ ಮಾಡ್ತಿದ್ದೀರಿ, ಇದನ್ನ ಸಹಿಸಲ್ಲ  ಈ ಮನುಷ್ಯನಿಗೆ ಮೂರು ಮುಖವಾಡ ಇದೆ. ಉತ್ತರ ಕರ್ನಾಟಕದ ಹುಲಿ ಅಂತಾರೆ, ಉ.ಕಕ್ಕೆ ಎಷ್ಟು ಅನುದಾನ ಕೊಂಡೊಯ್ದಿರಿ?

ಹಿಂದೂ ಹುಲಿ ಆದೋರು ಟಿಪ್ಪು ಟೋಪಿ ಹಾಕಿ, ಖಡ್ಗ ಹಿಡಿದು ಅವರ ಜತೆ ಊಟ ಮಾಡಿದ್ರಿ, ಎಲ್ಲಿ ಹೋಗಿತ್ತು ಆಗ ಹಿಂದೂ ಹುಲಿ? ಮೂರನೇಯದು ಪಂಚಮಸಾಲಿ ಹೋರಾಟದಲ್ಲಿ ಯತ್ನಾಳ್ ದು ದ್ವಂದ್ವ ನಿಲುವಿನ‌ ಮುಖವಾಡ. ಎಲ್ರೂ 2ಎ ಗಾಗಿ ಹೋರಾಟ ಮಾಡಿದ್ರೆ, ನಮಗೆ 2ಎ ಮೀಸಲಾತಿ ಬೇಡ ಅಂತಾರೆ . ತಮ್ಮ ಸ್ವಾರ್ಥಕ್ಕೆ ಯತ್ನಾಳ್ ಮೂರು ಮುಖವಾಡ ಹಾಕಿದ್ದಾರೆ, ಈಗ ಅವರ ಮುಖವಾಡ ಕಳಚಿದೆ. ನಿಮ್ಮ ಬೆಂಬಲಕ್ಕೆ ಸಂಸದರು ಇದ್ದಾರೆ ಅಂದ್ರಲ್ಲ, ತಾಕತ್ ಇದ್ರೆ ಅವರ ಹೆಸರು ಹೇಳಿ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.

ವಿಜಯೇಂದ್ರ ಬಚ್ಚಾ ಅಲ್ಲ, ಸಮರ್ಥ, ನುರಿತ ರಾಜಕಾರಣಿ.:ವಿಜಯೇಂದ್ರ ಗೆ ಜ್ಞಾನ ಇದೆ, ಪಕ್ಷ ಅಧಿಕಾರಕ್ಕೆ ತರುವ ಛಲ ಇದೆ. ಯತ್ನಾಳ್ ಮತ್ತು ತಂಡ ುಖವಾಡದಲ್ಲಿ ಸ್ವಾರ್ಥ ರಾಜಕಾರಣ ಮಾಡ್ತಿದ್ದಾರೆ. ಏನೇ ಇದ್ರೂ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು. ಯತ್ನಾಳ್, ರಮೇಶ್ ಜಾರಕಿಹೊಳಿ ಮಾತುಗಳಿಂದ ಕಾರ್ಯಕರ್ತರ ಮನಸಿಗೆ ನೋವಾಗಿದೆ. ಇದನ್ನು ಸಹಿಸಲ್ಲ ಎಂದು ಅವರು ನುಡಿದರು.

ಕೆಲವರು ಅವರನ್ನು ಬೆಂಬಲಿಸ್ತಿದ್ದಾರೆ. ಆಕಾಶಕ್ಕೆ ಉಗುಳಿದರೆ, ಅದು ಉಗುಳಿದವರ ಮೇಲೆಯೇ ಬೀಳುತ್ತೆ. ವಿಜಯೇಂದ್ರ ಮುಂದುವರಿತಾರೆ, ಅವರ ನೇತೃತ್ವದಲ್ಲಿ ಪಕ್ಷ ಕಟ್ತೇವೆ, ಮತ್ತೆ ಅಧಿಕಾರಕ್ಕೆ ತರುತ್ತೇವೆ. ಯತ್ನಾಳ್, ರಮೇಶ್ ಜಾರಕಿಹೊಳಿ ಹುಚ್ಚು ಹುಚ್ಚಾಗಿ ಮಾತಾಡಿದ್ದಾರೆ. ಅವರಿಬ್ಬರನ್ನ ಮುಲಾಜಿಲ್ಲದೇ ಉಚ್ಛಾಟನೆ ಮಾಡಿ ಅಂತ ಹೈಕಮಾಂಡ್ ಗೆ ಹೇಳ್ತೇವೆ. ಕಾಂಗ್ರೆಸ್ ಒಳ ಕಚ್ಚಾಟ ಮರೆಸಲು ಯತ್ನಾಳ್, ರಮೇಶ್ ವಿಜಯೇಂದ್ರ ವಿರುದ್ಧ ಮಾತಾಡ್ತಿದ್ದಾರೆ.ವಅದಕ್ಕೇ ನಾನು ಹೇಳಿದ್ದು, ಅವರು ಕಾಂಗ್ರೆಸ್ ಏಜೆಂಟರು ಅಂತ ಬಹಿರಂಗವಾಗಿ ಹೇಳುತ್ತೇನೆ ಎಂದು ಅವರು ಹೇಳಿದರು.

ಯಾರು ಯಡಿಯೂರಪ್ಪ ಅವರಿಂದ ಅಧಿಕಾರ ಪಡೆದಿದ್ರು ಅವರೆ ಇವತ್ತು ಎತ್ತಕಟ್ಟುತ್ತಿದ್ದಾರೆ. ಯತ್ನಾಳ , ರಮೇಶ್ ಜಾರಕಿಹೊಳಿ ಅವರನ್ನ ಎತ್ತಿ ಕಟ್ಟುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಯತ್ನಾಳ್ ಒಳ್ಳೆಯವರೆ, ಆದ್ರೆ ಪಕ್ಷದ ಕೆಲವರು ಅವರಿಗೆ ಪ್ರಚೋದನೆ ಕೊಡ್ತಿದ್ದಾರೆ. ಹೈಕಮಾಂಡ್ ಗೆ ಎಲ್ಲಾ ವರದಿ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನು‌ ಬಿಚ್ವಿಡುತ್ತೇವೆ ಅಂತ ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments