Saturday, May 16, 2026
Google search engine
Homeವಿದೇಶರಷ್ಯಾ ಕರಾವಳಿಯಲ್ಲಿ 7.4 ತೀವ್ರತೆ ಭೂಕಂಪನ; 1 ಗಂಟೆಯಲ್ಲಿ 5 ಬಾರಿ ಕಂಪಿಸಿದ ಭೂಮಿ

ರಷ್ಯಾ ಕರಾವಳಿಯಲ್ಲಿ 7.4 ತೀವ್ರತೆ ಭೂಕಂಪನ; 1 ಗಂಟೆಯಲ್ಲಿ 5 ಬಾರಿ ಕಂಪಿಸಿದ ಭೂಮಿ

ರಷ್ಯಾ ಕರಾವಳಿ ತೀರದಲ್ಲಿ ಅತ್ಯಂತ ಪ್ರಬಲವಾದ ಭೂಕಂಪನಗಳು ಒಂದೇ ಗಂಟೆಯ ಅವಧಿಯಲ್ಲಿ 5 ಬಾರಿ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ರಷ್ಯಾದ ಪೂರ್ವ ಕಮ್ಚಟ್ಕಾದ ಪೂರ್ವ ಕರಾವಳಿಯಲ್ಲಿ ಭಾನುವಾರ ಬೆಳಿಗ್ಗೆ 5 ಬಾರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ ಗರಿಷ್ಠ 7.4 ತೀವ್ರತೆ ದಾಖಲಾಗಿದೆ. ಇದರಿಂದ ಹವಾಯಿ ದ್ವೀಪದಲ್ಲಿ ದೊಡ್ಡ ಅಲೆಗಳು ಕಾಣಿಸಿಕೊಂಡಿದ್ದು, ಸುನಾಮಿ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಜರ್ಮನ್ ಸಂಶೋಧನಾ ಕೇಂದ್ರ ಜಿಯೋ ಸೈನ್ಸಸ್ (ಜಿಎಫ್‌ Z ಡ್) 6.7 ತೀವ್ರತೆಯಲ್ಲಿ ಭೂಕಂಪವಾಗಿದೆಎಂದು ವರದಿ ಮಾಡಿತ್ತು. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್ಸಿ) ಮತ್ತು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) 7.4 ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ವರದಿ ಮಾಡಿವೆ.

ಅಮೆರಿಕದ ಭೂವಿಜ್ಞಾನ ಸಂಶೋಧಕರರ ಪ್ರಕಾರ ರಷ್ಯಾದ ಕರಾವಳಿಯಲ್ಲಿ ಒಂದು ಗಂಟೆಯ ಅವಧಿಯಲ್ಲಿ 5 ಬಾರಿ ಪ್ರಬಲ ಭೂಕಂಪನಗಳು ಸಂಭವಿಸಿದ್ದು, ಸುಮಾರು 10 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ರಷ್ಯಾದ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 147 ಕಿ.ಮೀ. ದೂರದಲ್ಲಿ 6.6 ತೀವ್ರತೆ, ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 151 ಕಿ.ಮೀ. ದೂರದಲ್ಲಿ 6.7 ತೀವ್ರತೆ, ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 144 ಕಿ.ಮೀ. ದೂರದಲ್ಲಿ 7.4 ತೀವ್ರತೆ, ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 130 ಕಿ.ಮೀ. ದೂರದಲ್ಲಿ 6.7 ತೀವ್ರತೆ ಹಾಗೂ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯ 142 ಕಿ.ಮೀ. ದೂರದಲ್ಲಿ 7 ತೀವ್ರತೆಯಲ್ಲಿ ಭೂಕಂಪನಗಳು ಸಂಭವಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments