ಕೈಕಾಲು ತೊಳೆದುಕೊಳ್ಳಲು ಎಂದು ಕಾಲುವೆಗೆ ತೆರಳಿ ವೇಳೆ ಕಾಲುಜಾರಿ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.
ನಾರಾಯಣಪುರ ಬಲದಂಡೆ ಆನೆ ಹೊಸೂರ ಬಳಿ ನಡೆದ ಘಟನೆಯಲ್ಲಿ ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35)ಮತ್ತು ದೇವಮ್ಮ (30) ಮೃತಪಟ್ಟಿದ್ದಾರೆ.
ಮಹಿಳೆಯರು ನಿತ್ಯದಂತೆ ಭತ್ತ ಹಚ್ಚುವ ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುವ ಸಂದರ್ಭದಲ್ಲಿ ಕಾಲುವೆಯ ನೀರಿನಿಂದ ಕೈಕಾಲು, ಮುಖ ತೊಳೆದುಕೊಳ್ಳಲು ತೆರಳಿದ ವೇಳಿ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ.
ಘಟನೆಯಲ್ಲಿ ಮೃತರಾದ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನೋರ್ವ ಮಹಿಳೆಯ ಮೃತದೇಹ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿದ್ದು, ತನಿಖೆ ಮುಂದುವರೆದಿದೆ.



