Monday, May 11, 2026
Home Uncategorized ರಾಜ್ಯದಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್: 33ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್: 33ಕ್ಕೇರಿದ ಸೋಂಕಿತರ ಸಂಖ್ಯೆ

by Vahini
0 comments
hmpv virus

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಇದರಿಂದ ಕೊರೊನಾ ಅಲೆಯ ಭೀತಿ ರಾಜ್ಯದಲ್ಲಿ ಹೆಚ್ಚಾಗಿದೆ.

ಕಳೆದ 165 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, 9 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಮೇ ತಿಂಗಳಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟು 257 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೇಸ್‌ಗಳಿವರುವುದಾಗಿ ಎರಡು ದಿನಗಳ ಹಿಂದೆ ವರದಿಯಾಗಿತ್ತು.

ರಾಜ್ಯದಲ್ಲಿ ಕೋವಿಡ್‌ನಿಂದ ಯಾರೂ ಆಸತ್ರೆಗೆ ದಾಖಲಾಗಿಲ್ಲ, ತೀವ್ರ ಲಕ್ಷಣಗಳು ಪತ್ತೆಯಾಗಿಲ್ಲ. ಹೀಗಾಗಿ ರೂಪಾಂತರಿ ಕೊರೊನಾದ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಹೇಳಿದೆ.

ಚೀನಾ ಮತ್ತು ಸಿಂಗಾಪುರಗಳಲ್ಲಿ ಕೊರೋನ ರೂಪಾಂತರಿ ತಳಿ ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದಲ್ಲಿ ಭಿನ್ನ 8 ತಳಿಗಳು ಪತ್ತೆಯಾಗಿವೆ. ಅಲ್ಲದೇ ಹೊಸ ಕೊರೊನಾ ಅಲೆಯಿಂದ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

ಚೀನಾದಲ್ಲಿ ಕೊಳಚೆ ನೀರಿನಲ್ಲೂ ಕೋವಿಡ್-19 ವೈರಸ್ ಪತ್ತೆಯಾಗಿದೆ. ಹೆಚ್ಚಿನ ಜನರು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು.  ಇದೀಗ ಈ ವೈರಸ್ ಜಗತ್ತಿನ ನಾನಾ ಕಡೆ ಮತ್ತೆ ಕಾಣಿಸಿಕೊಂಡಿದೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign