Monday, 16 November 2026 — Kannadavahini
BREAKING NEWS
ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ
Uncategorized

ಡೊನಾಲ್ಡ್ ಟ್ರಂಪ್ ವಿರುದ್ಧ ಜನಾಕ್ರೋಶ: ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 26 ವೀಕ್ಷಣೆಗಳು
america protest

ನ್ಯೂಯಾರ್ಕ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ನಿಲುವುಗಳ ವಿರುದ್ಧ  ಜನಾಕ್ರೋಶ ಭುಗಿಲೆದ್ದಿದ್ದು, ಅಮೆರಿಕದ ಹಲವು ನಗರಗಳಲ್ಲಿ ಬೀದಿ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಜನಸಾಗರ ಕಂಡು ಬರುತ್ತಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ತೆರಿಗೆ ನೀತಿಗಳು ಹಾಗೂ ಸಾಮಾಜಿಕ ಸೇವೆಗಳ ಮೇಲಿನ ಪ್ರಹಾರ ಮಾಡುವ ಅವರ ಆರ್ಥಿಕ ಕ್ರಮಗಳ ಖಂಡಿಸಿರುವ ಪ್ರತಿಭಟನಾಕಾರರು “ಹ್ಯಾಂಡ್ಸ್ ಆಫ್!” ಎಂಬ ಘೋಷಣೆಯೊಂದಿಗೆ ನಡೆದ ಈ ಪ್ರತಿಭಟನೆ ಅಮೇರಿಕಾದ ಇತಿಹಾಸದಲ್ಲೇ ಇತ್ತೀಚಿನ ಕಾಲದಲ್ಲಿ ಕಂಡ ಪ್ರಮುಖ ನಾಗರಿಕ ಚಳವಳಿಗಳಲ್ಲೊಂದಾಗಿ ಹೊರಹೊಮ್ಮಿದೆ.

ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್ನಲ್ಲಿ ಆರಂಭವಾದ ಜನಸಾಗರ ಲಾಸ್ ಏಂಜಲೀಸ್, ವಾಷಿಂಗ್ಟನ್ ಡಿ.ಸಿ., ಬೋಸ್ಟನ್, ಅಟ್ಲಾಂಟಾ ಸೇರಿದಂತೆ ನೂರಾರು ಪಟ್ಟಣಗಳನ್ನು ಪ್ರವಾಹದಂತೆ ಬೆಸೆಯಿತು.

ಪ್ರತಿಭಟನಾಕಾರರು ಕೈಗಳಲ್ಲಿ “ಜನಸೇವೆ ನಮ್ಮ ಹಕ್ಕು”, “ಮೆಡಿಕೇಡ್ ಉಳಿಸಿರಿ”, “ಶಿಕ್ಷಣವಿಲ್ಲದೆ ಏನು ಭವಿಷ್ಯ?” ಎಂಬ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದರು. ಟ್ರಂಪ್ ಆಡಳಿತವು ಮೆಡಿಕೇರ್, ಮೆಡಿಕೇಡ್ ಹಾಗೂ ಇತರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನೀಡುತ್ತಿದ್ದ ಬಂಡವಾಳವನ್ನು ಕಡಿತಗೊಳಿಸಿ, ಕೋಟ್ಯಾಧಿಪತಿಗಳಿಗೆ ತೆರಿಗೆ ರಿಯಾಯಿತಿಯನ್ನು ನೀಡುವ ಪ್ರಸ್ತಾವವನ್ನು ಮುಂದಿಟ್ಟಿದೆ ಎಂಬ ವಿಚಾರವೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜನರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಾಮಾಜಿಕ ಕಾರ್ಯಕರ್ತರು, ವರ್ಗಭೇದ ತೊಂದರೆ ಅನುಭವಿಸಿದವರು.
“ಈ ದೇಶದ ಆರ್ಥಿಕತೆ ಕೆಲವು ಗಣನೀಯ ಕಾರ್ಪೊರೇಟ್ಗಳು ಮತ್ತು ಕೋಟ್ಯಾಧಿಪತಿಗಳಿಗಾಗಿ ಮಾತ್ರವಲ್ಲ, ಇದು ಎಲ್ಲರಿಗಾಗಿ ಸಮಾನವಾಗಿರಬೇಕು,” ಎಂದು ಶಿಕಾಗೊ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾರಿಯಾ ಜೋನ್ಸ್ ಹೇಳಿದರು.

ಈ ಬೃಹತ್ ಚಳವಳಿ ದೇಶದ ಎಲ್ಲ ೫೦ ರಾಜ್ಯಗಳಲ್ಲೂ ಪ್ರತಿಧ್ವನಿಸಿದ್ದು, ಟ್ರಂಪ್ ಅವರ ವಿರುದ್ಧ ಸಾರ್ವಜನಿಕ ವಿರೋಧದ ಮಟ್ಟವನ್ನು ಸ್ಪಷ್ಟಪಡಿಸಿದೆ.

ಕುತೂಹಲದ ಸಂಗತಿಯೆಂದರೆ, ಈ ಪ್ರತಿಭಟನೆಗಳು ಕೇವಲ ಡೆಮಾಕ್ರಟಿಕ್ ಗಟ್ಟಿತನವಿರುವ ನಗರಗಳಲ್ಲಿ ಮಾತ್ರವಲ್ಲದೆ, ಟ್ರಂಪ್ಗೆ ಬೆಂಬಲವಿತ್ತ ವೆಸ್ಟ್ ವರ್ಜೀನಿಯಾ, ಟೆಕ್ಸಾಸ್ನ ಕೆಲವು ಭಾಗಗಳಲ್ಲಿಯೂ ನಡೆದವು.

ಪ್ರತಿಭಟನೆಯೊಂದಿಗೇ ವಿದೇಶಗಳಲ್ಲಿಯೂ ಬೆಂಬಲದ ಧ್ವನಿ ಕೇಳಿಬಂದಿದೆ. ಲಂಡನ್, ಪ್ಯಾರಿಸ್, ಟೊರಾಂಟೋ ಮುಂತಾದ ಕಡೆಗಳಲ್ಲಿ ಅಮೆರಿಕಾದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಗೊಂಡಿದೆ.ಈ ಮೂಲಕ ಟ್ರಂಪ್ ಅವರ ಹೊಸ ಆರ್ಥಿಕ ಮತ್ತು ತೆರಿಗೆ ನೀತಿ ಕೇವಲ ದೇಶೀಯವಾಗಿ ಮಾತ್ರವಲ್ಲ, ಜಾಗತಿಕವಾಗಿ ಕೂಡ ಚರ್ಚೆಗೆ ಗುರಿಯಾಗಿದೆ.

ಇದಕ್ಕೂ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ಟ್ರಂಪ್, “ನಾವು ಅಮೆರಿಕಾದ ಆರ್ಥಿಕತೆಯನ್ನು ಪುನಃ ಬಲಿಷ್ಠಗೊಳಿಸುತ್ತಿದ್ದೇವೆ. ಕೆಲವು ಜನರು ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ,” ಎಂದು ಟ್ವೀಟ್ ಮಾಡಿದರು. ಆದರೆ ಈ ಹೇಳಿಕೆ ಜನರ ಆಕ್ರೋಶವನ್ನು ತಣಿಸುವಲ್ಲಿ ಫಲಕಾರಿಯಾಗಲಿಲ್ಲ.

ಈ ಬೃಹತ್ ಪ್ರತಿಭಟನೆಗಳ ಮೂಲಕ ಅಮೇರಿಕಾದ ಜನತೆ ಸರ್ಕಾರದಿಂದ ಕೇವಲ ಆರ್ಥಿಕ ಪ್ರಗತಿಯ ಅಂಕಿಅಂಶಗಳನ್ನಲ್ಲ, ಸಮಾನತೆ, ನ್ಯಾಯ, ಹಾಗೂ ಸಾಮಾಜಿಕ ಭದ್ರತೆಯ ಆಶಯವನ್ನೂ ನಿರೀಕ್ಷಿಸುತ್ತಾರೆ ಎಂಬ ಸ್ಪಷ್ಟ ಸಂದೇಶವೊಂದನ್ನು ರಾಷ್ಟ್ರದ ನಾಯಕರಿಗೆ ನೀಡಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8420 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment