ಮಗಳ ಮೇಲೆ ಅತ್ಯಾಚಾರ ಎಸಗಿದ ಸಲಿಂಗ ಕಾಮಿ ಸ್ನೇಹಿತನ ಮರ್ಮಾಂಗ ಕತ್ತರಿಸಿ ಹಾಕಿದ ನಂತರ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಡಿಯೊರಾ ಜಿಲ್ಲೆಯಲ್ಲಿ 32 ವರ್ಷದ ಆರ್ಕೆಸ್ಟ್ರಾ ಕಲಾವಿದ ಪತ್ನಿಯಿಂದ ದೂರ ಆಗಿ 35 ವರ್ಷದ ಸ್ಬೇಹಿತ ರಾಮಬಾಬು ಯಾದವ್ ಜೊತೆ ನೆಲೆಸಿದ್ದ. ಸಮಯ ಕಳೆದಂತೆ ಇಬ್ಬರೂ ಮತ್ತಷ್ಟು ಆತ್ಮೀಯರಾಗಿದ್ದು, ದೈಹಿಕ ಸಂಪರ್ಕ ಬೆಳೆಸುವ ಮೂಲಕ ಸಲಿಂಗಕಾಮಿಗಳಾಗಿದ್ದರು.
ವಾರದ ಹಿಂದೆ ರಾಮಬಾಬು ತಂದೆಯನ್ನು ನೋಡಲು ಮನೆಗೆ ಬಂದಿದ್ದ ಸ್ನೇಹಿತನ ೬ ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಮಗಳು ಘಟನೆಯನ್ನು ತಂದೆಯ ಬಳಿ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಈ ವಿಷಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿತ್ತು.
ರಾಮಬಾಬುನ ಮರ್ಮಾಂಗವನ್ನು ಕತ್ತರಿಸಿದ ತಂದೆ, ಕೆಲವೇ ಗಂಟೆಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರ್ಮಾಂಗ ಕತ್ತರಿಸಿದ್ದರಿಂದ ಗಂಭೀರವಾಗಿ ಗಾಯಗೊಂಡ ರಾಮಬಾಬುನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದರೆ ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ತಂದೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕ ಆಘಾತಕ್ಕೆ ಒಳಗಾಗಿರುವ ಮಗಳನ್ನು ಅಜ್ಜ-ಅಜ್ಜಿಯ ಮನೆಗೆ ಸುರಕ್ಷಿತೆಯ ದೃಷ್ಟಿಯಿಂದ ಬಿಡಲಾಗಿದೆ.



