Tuesday, June 30, 2026
Google search engine
Homeಮನರಂಜನೆಹಿರಿಯ ನಟ ಪ್ರೇಮ್‌ ಚೋಪ್ರಾಗೆ ಎದೆನೋವು: ಆಸ್ಪತ್ರೆಗೆ ದಾಖಲು

ಹಿರಿಯ ನಟ ಪ್ರೇಮ್‌ ಚೋಪ್ರಾಗೆ ಎದೆನೋವು: ಆಸ್ಪತ್ರೆಗೆ ದಾಖಲು

ಬಾಲಿವುಡ್‌ ಹಿರಿಯ ನಟ ಪ್ರೇಮ್‌ ಚೋಪ್ರಾ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರೇಮ್‌ ಚೋಪ್ರಾ ಅವರನ್ನು ಮೂರು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎದೆನೋವು ಹಾಗೂ ಸೋಂಕಿನ ಕಾರಣ ಪ್ರೇಮ್‌ ಚೋಪ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶೀಘ್ರ ಗುಣಮುಖರಾಗುತ್ತಾರೆ ಎಂದು ವೈದ್ಯ ತಿಳಿಸಿದ್ದಾರೆ.

ಬಾಲಿವುಡ್‌ ಕಂಡ ಅತ್ಯಂತ ಹಿರಿಯ ಹಾಗೂ ಜನಪ್ರಿಯ ನಟ ಹಾಗೂ ಖಳನಟ ಪ್ರೇಮ್‌ ಚೋಪ್ರಾ ಪಂಜಾಬಿ ಚಿತ್ರದ ಮೂಲಕ ಪಾದರ್ಪಣೆ ಮಾಡಿದ್ದರು. 1960ರಲ್ಲಿ ಚೌಧರಿ ಕರ್ನಿಲ್‌ ಸಿಂಗ್‌ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿಗೆ ಪಾತ್ರರಾದರು. ಇದರ ಬೆನ್ನಲ್ಲೇ ಶಹೀದ್‌ (1965) ಬಾಲಿವುಡ್‌ ಚಿತ್ರದ ಪ್ರಮುಖ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments